IIFA AWARD 2018 : ಅತ್ಯುತ್ತಮ ನಟ, ನಟಿ ಪ್ರಶಸ್ತಿಗೆ ಭಾಜನರಾದ ಇರ್ಫಾನ್ ಖಾನ್, ಶ್ರೀದೇವಿ

ಬ್ಯಾಂಕಾಕ್‌ : ಬಾಲಿವುಡ್‌ನ ಆಸ್ಕರ್‌ ಪ್ರಶಸ್ತಿ ಎಂದೇ ಕರೆಯಲ್ಪಡುವ ಐಐಎಫ್‌ಎ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಬಾಲಿವುಡ್‌ ನಟಿ ಶ್ರೀದೇವಿ ಹಾಗೂ ಇರ್ಫಾನ್‌  ಖಾನ್‌ ಅವರಿಗೆ ಅತ್ಯುತ್ತಮ ನಟ/ನಟಿ ಪ್ರಶಸ್ತಿ ದೊರೆತಿದೆ.

ಅದ್ದೂರಿ ತಾರಾ ಮೇಳ, ಝಗಮಗಿಸುವ ದೀಪಗಳ ಬೆಳಕಿನೊಂದಿಗೆ 19ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭ ಏರ್ಪಟ್ಟಿತು.ಈ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ನಿರ್ದೇಶಕ ಕರಣ್ ಜೋಹರ್ ಮತ್ತು ನಟ ರಿತೇಶ್ ದೇಶ್ ಮುಖ್ ನಿರೂಪಕರಾಗಿದ್ದರು.

Image result for iifa award 2018

ಇನ್ನು ವಿದ್ಯಾ ಬಾಲನ್ ನಟನೆಯ ‘ತುಮ್ಹಾರಿ ಸುಲು’ಗೆ 2017ನೇ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದ್ದು, ಉತ್ತಮ ನಟಿ ಶ್ರೀದೇವಿ, ಉತ್ತಮ ನಟ ಇರ್ಫಾನ್ ಖಾನ್ ಗೆ ದೊರಕಿದೆ.

ಹಿಂದಿ ಮೀಡಿಯಂ ಚಿತ್ರದ ನಟನೆಗಾಗಿ ಇರ್ಫಾನ್ ಖಾನ್ ಗೆ ಅತ್ಯುತ್ತನ ನಟ ಪ್ರಶಸ್ತಿ ಬಂದಿದೆ. ತಮ್ಮ ಆರೋಗ್ಯ ಸಮಸ್ಯೆಯಿಂದ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಬಾರದ ಕಾರಣ ಅವರ ಪರವಾಗಿ ಹೈದರ್ ಚಿತ್ರದ ಸಹ ನಟಿ ಶ್ರದ್ಧಾ ಕಪೂರ್ ಪ್ರಶಸ್ತಿ ಸ್ವೀಕರಿಸಿದರು.

Image result for sridevi and irrfan khan

ಮಾಮ್ ಚಿತ್ರದಲ್ಲಿ ಪ್ರತೀಕಾರ ತೀರಿಸುವ ಮಹಿಳೆಯ ಪಾತ್ರದಲ್ಲಿ ಗಮನಸೆಳೆದಿದ್ದ ನಟಿ ಶ್ರೀದೇವಿಯವರಿಗೆ ಉತ್ತಮ ನಟಿ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು. ಅವರ ಪತಿ ಬೋನಿ ಕಪೂರ್ ಪ್ರಶಸ್ತಿ ಪಡೆದರು.

Image result for sridevi and irrfan khan

ಹಿಂದಿ ಮೀಡಿಯಂ ಚಿತ್ರದ ನಿರ್ದೇಶನಕ್ಕಾಗಿ ಸೈಕತ್ ಚೌಧರಿಯವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಸೂಪರ್ ಸ್ಟಾರ್ ಚಿತ್ರದಲ್ಲಿ ಉತ್ತಮ ನಟನೆಗಾಗಿ ಮೆಹರ್ ವಿಜ್ ಅತ್ಯುತ್ತಮ ಪೋಷಕ ನಟಿ ಮತ್ತು ಮಾಮ್ ಚಿತ್ರದಲ್ಲಿನ ಅಭಿನಯಕ್ಕಾಗಿ ನವಾಜುದ್ದೀನ್ ಸಿದ್ದಿಖಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸ್ವೀಕರಿಸಿದರು.

ಈ ವರ್ಷ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದ ನ್ಯೂಟನ್ ಚಿತ್ರಕ್ಕೆ ಅತ್ಯುತ್ತಮ ಕಥೆ ಪ್ರಶಸ್ತಿ ನಿರ್ದೇಶಕ ಮಾಸುರ್ಕರ್ ಅವರಿಗೆ ಲಭಿಸಿತು.

ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ ಅರ್ಮಾನ್  ಮಲ್ಲಿಕ್, ತನಿಶ್ಕ್ ಬಗ್ಚಿ ಮತ್ತು ಅಖಿಲ್ ಸಚ್ ದೇವ್ ಅವರಿಗೆ ಲಭಿಸಿದೆ. ಇದೇ ವೇಳೆ ಬಾಲಿವುಡ್ ದಂತಕಥೆಗಳಾದ ಶ್ರೀದೇವಿ, ವಿನೋದ್ ಖನ್ನಾ ಮತ್ತು ಶಶಿ ಕಪೂರ್ ಅವರಿಗೆ ಗೌರವ ನಮನ ಸಲ್ಲಿಸಲಾಯಿತು. ವೃತ್ತಿ ಜೀವನದಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಅನುಪಮ್ ಖೇರ್ ಅವರಿಗೆ ಅದ್ವಿತೀಯ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com