FIFA 2018 : ಹ್ಯಾರಿ ಕೇನ್ ಹ್ಯಾಟ್ರಿಕ್ ಮಿಂಚು : ಪ್ರೀ ಕ್ವಾರ್ಟರ್ ಹಂತಕ್ಕೆ ಅಡಿಯಿಟ್ಟ ಇಂಗ್ಲೆಂಡ್

ಫಿಫಾ ವಿಶ್ವಕಪ್-2018 ಟೂರ್ನಿಯಲ್ಲಿ ರವಿವಾರ ನಡೆದ ‘ಜಿ’ ಗುಂಪಿನ ಲೀಗ್ ಪಂದ್ಯದಲ್ಲಿ ಪನಾಮಾ ವಿರುದ್ಧ 6-1 ಗೋಲುಗಳ ಅಂತರದಿಂದ ಭರ್ಜರಿ ಜಯ ಗಳಿಸಿರುವ ಇಂಗ್ಲೆಂಡ್ ಪ್ರೀ ಕ್ವಾರ್ಟರ್ ಹಂತಕ್ಕೆ ಅಡಿಯಿಟ್ಟಿದೆ. ನಿಝ್ನಿ ನೊವ್ಗೊರೊಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಹ್ಯಾಟ್ರಿಕ್ ಗೋಲ್ ಬಾರಿಸಿ ಮಿಂಚಿದರು.

ಜಪಾನ್ ಹಾಗೂ ಸೆನೆಗಲ್ ತಂಡಗಳ ನಡುವೆ ಎಕ್ಟೆರಿನ್ ಬರ್ಗ್ ಅರೆನಾದಲ್ಲಿ ನಡೆದ ‘ಎಚ್’ ಗುಂಪಿನ ಲೀಗ್ ಪಂದ್ಯ 2-2 ರಿಂದ ಡ್ರಾನಲ್ಲಿ ಅಂತ್ಯಗೊಂಡಿದೆ.

ಕಜಾನ್ ಅರೆನಾದಲ್ಲಿ ಭಾನುವಾರ ನಡೆದ ‘ಎಚ್’ ಗುಂಪಿನ ಮತ್ತೊಂದು ಲೀಗ್ ಪಂದ್ಯದಲ್ಲಿ ಪೊಲ್ಯಾಂಡ್ ವಿರುದ್ಧ ಕೊಲಂಬಿಯಾ 3-0 ಗೋಲುಗಳ ಅಂತರದ ಜಯ ಗಳಿಸಿದೆ.

 

Leave a Reply

Your email address will not be published.

Social Media Auto Publish Powered By : XYZScripts.com