Cricket : ಜೋಸ್ ಬಟ್ಲರ್ ಅಜೇಯ ಶತಕ : 5-0 ರಿಂದ ಆಸೀಸ್ ವೈಟ್‍ವಾಷ್ ಮಾಡಿದ ಇಂಗ್ಲೆಂಡ್

ಮ್ಯಾಂಚೆಸ್ಟರ್ ಓಲ್ಡ್ ಟ್ರಾಫೊರ್ಡ್ ಅಂಗಳದಲ್ಲಿ ಭಾನುವಾರ ನಡೆದ 5ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆತಿಥೇಯ ಇಂಗ್ಲೆಂಡ್ 1 ವಿಕೆಟ್ ರೋಚಕ ಜಯ ದಾಖಲಿಸಿದೆ. ಇದರೊಂದಿಗೆ ಸರಣಿಯನ್ನು 5-0 ಕ್ಲೀನ್ ಸ್ವೀಪ್ ಮಾಡಿರುವ ಇಂಗ್ಲೆಂಡ್ ವೈಟ್ ವಾಷ್ ಸಾಧನೆ ಮಾಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ 34.4 ಓವರುಗಳಲ್ಲಿ 205 ರನ್ ಗಳಿಸಿ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರವಾಗಿ ಟ್ರಾವಿಸ್ ಹೆಡ್ 56, ಡಾರ್ಸಿ ಶಾರ್ಟ್ 47, ಅಲೆಕ್ಸ್ ಕ್ಯಾರಿ 44 ರನ್ ಗಳಿಸಿದರು. ಇಂಗ್ಲೆಂಡ್ ಬೌಲರ್ಗಳಾದ ಮೋಯಿನ್ ಅಲಿ 4 ಹಾಗೂ ಸ್ಯಾಮ್ ಕರನ್ 2 ವಿಕೆಟ್ ಪಡೆದರು.

Image result for england 5-0 whitewash jos buttler

ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ 48.3 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು 208 ರನ್ ಸೇರಿಸಿ ಗೆಲುವಿನ ದಡ ಸೇರಿತು. ಏಕಾಂಗಿ ಹೋರಾಟ ನಡೆಸಿದ ಜೋಸ್ ಬಟ್ಲರ್ ಅಜೇಯ ಶತಕ ಬಾರಿಸಿದರು. 122 ಎಸೆತಗಳನ್ನು ಎದುರಿಸಿ 110 ರನ್ ಗಳಿಸಿದ ಜೋಸ್ ಬಟ್ಲರ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿ ಪಂದ್ಯಶ್ರೇಷ್ಟ ಹಾಗೂ ಸರಣಿಶ್ರೇಷ್ಟ ಎರಡೂ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

 

 

Leave a Reply

Your email address will not be published.

Social Media Auto Publish Powered By : XYZScripts.com