ಯುವ ದಲಿತ ಸಾಹಿತಿಗಳ ಸಮ್ಮೇಳನದಲ್ಲಿ ಬಿಜೆಪಿಗರನ್ನು ಹಾಡಿ ಹೊಗಳಿದ ಪತ್ರಕರ್ತ : ಯುವಕರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಎಸ್ಕೇಪ್‌ !

ಪತ್ರಕರ್ತರೊಬ್ಬರು ತಮ್ಮೆದುರು ಕುಳಿತಿದ್ದ ಬಿಜೆಪಿ ನಾಯಕರೊಬ್ಬರನ್ನು ಮೆಚ್ಚಿಸಲು ಅಸಂಬದ್ದವಾಗಿ ಮಾತನಾಡಿದ್ದು ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತನಗೆ ಇತಿಹಾಸ ಗೊತ್ತು, ದಲಿತರ ಮೇಲೆ ನಡೆದ ದೌರ್ಜನ್ಯ ಗೊತ್ತು ಎಂದು ತಮಗಿಂತ ಮುನ್ನ ಮಾತನಾಡಿದ ಡಾ. ಸತ್ಯಾನಂದ ಪಾತ್ರೋಟ ಅವರ ಭಾಷಣವನ್ನು ಉಲ್ಲೇಖಿಸಿದ ಕನ್ನಡ ಪ್ರಭ ಪತ್ರಿಕೆಯ ಧಾರವಾಡದ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ, ವಿಜಯನಗರ ಕಾಲದಲ್ಲೇ ಪೆನ್ನು ಭ್ರಷ್ಟಗೊಂಡಿತ್ತು ಎಂಬುದನ್ನು ಪೋತ್ರಾಟರು ನೆನಪಿಡಲಿ ಎಂದರು. ಮಾತು ಬೆಳೆಸುತ್ತಾ ಮತ್ತೆ ಮತ್ತೆ ದಲಿತರಿಗಾದ ಅನ್ಯಾಯವನ್ನು  ಪ್ರಶ್ನಿಸಿದ್ದಲ್ಲದೆ, ದಲಿತರ ಬಗ್ಗೆ ಕಾಳಜಿ ಮರೆತು ಬಿಜೆಪಿ ಪರ ಪ್ರಚಾರ ಕಾರ್ಯ ಕೈಗೊಂಡಿದ್ದರು.

ಧಾರವಾಡದಲ್ಲಿ ಭಾನುವಾರ ದಲಿತ ಯುವ ಸಾಹಿತಿಗಳ ಸಮ್ಮೇಳನ ನಡೆದಿದ್ದು, ಅದರಲ್ಲಿ ನಡೆದ ಸಂಗತಿ ಇದು. ‘ದಲಿತರು ಹೆದರುವ ಅವಶ್ಯವೇ ಇಲ್ಲ. ನಮ್ಮ ರಾಮನಾಥ ಕೋವಿಂದರು ರಾಷ್ಟ್ರಪತಿಯಾಗಿದ್ದಾರೆ. ಅದೇ ನಮ್ಮ ಶಕ್ತಿ’ ಎಂದರು. ಆಗಲೇ ಸ್ವಂತ ವಿವೇಚನೆಯಿಂದ ಯೋಚಿಸುವ ಯುವಕರು ಎಚ್ಚೆತ್ತುಕೊಂಡರು. ಆಗಲೂ ಮಾತು ಮುಂದುವರಿಸಿದ ಪತ್ರಕರ್ತ ಸಿದ್ದಣ್ಣವರ, ‘ನೋಡಿ, ಇಲ್ಲಿ ಚಂದ್ರಕಾಂತ ಬೆಲ್ಲದರು ಬಂದಿದ್ದಾರೆ. ಸ್ವಯಂ ಪ್ರೇರಿತರಾಗಿ ಬಂದಿದ್ದಾರೆ. ಅಂತಹವರು ನಿಜವಾದ ಶರಣರು. ದಲಿತರ ಉದ್ದಾರಕರು’ ಎಂದು ವ್ಯವಹಾರದಂತೆ ಮಾತನಾಡಿದರು. ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟೆ ಮಂದಿಗೆ ಈ ಪತ್ರಕರ್ತರ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಆದರೆ ದೂರದಿಂದ ಬಂದ ದಲಿತ ಯುವ ಸಾಹಿತಿಗಳು ಇವರು ಏನೋ ಒಳ್ಳೆಯದನ್ನು ಹೇಳುತ್ತಾರೆ ಎಂದು ಕಾಯುತ್ತಿದ್ದರು. ಆದರೆ ‘ಅಂಬೇಡ್ಕರ್ ಅವರನ್ನು ನರೇಂದ್ರ ಮೋದಿ ಗೌರವಿಸಿದ್ದಾರೆ. ನಾವು ನೀವೆಲ್ಲರೂ ಮೋದಿಯವರನ್ನು ಸ್ವೀಕರಿಸಲೇ ಬೇಕು’ ಎಂದು ಜೋರು ಧ್ವನಿಯಲ್ಲಿ ಅರಚಿದ ಕೂಡಲೇ, ಅಲ್ಲಲ್ಲಿ ಭಿನ್ನಮತದ ಧ್ವನಿ ಎದ್ದವು. ಕೊನೆಗೆ ದಲಿತ ಯುವಕರ ಜೋರು ಧ್ವನಿಗೆ ಉತ್ತರಿಸಲಾಗದ ಸಿದ್ದಣ್ಣವರ ಮೈಕನ್ನು ಸಂಘಟಕರಿಗೆ ಕೊಟ್ಟು ಸುಮ್ಮನಾದರು.

ಅವತ್ತು ಮುಂಜಾನೆ ಧರಿಣಿದೇವಿ ಮಾಲಗಿತ್ತಿ, ಸಮತಾ ದೇಶಮಾನೆ ಅದ್ಭುತವಾಗಿ ಮಾತನಾಡುವ ದಲಿತ ಯುವ ಸಾಹಿತಿಗಳನ್ನು ಪ್ರೋತ್ಸಾಹಿಸಿದ್ದರು. ಸಿದ್ದಣ್ಣನವರ್ ಮಾತಾಡಿದ ಕೂಡಲೇ ಸಮ್ಮೇಳನದ ಉದ್ದೇಶವೇ ತಲೆ ಕೆಳಗಾಗುವ ಪರಿಸ್ಥಿತಿ ಎದುರಾಗಿತ್ತು. ಆದರೆ ಯುವ ದಲಿತರು ಅದಕ್ಕೆ ಆಸ್ಪದ ಕೊಡದೆ ಎಚ್ಚೆತ್ತುಕೊಂಡು ಸಮ್ಮೇಳನದ ಯಶಸ್ಸಿಗೆ ಕಾರಣರಾದರು….. ಅದು ಅಂಬೇಡ್ಕರರ ಗೆಲುವು….!

Leave a Reply

Your email address will not be published.

Social Media Auto Publish Powered By : XYZScripts.com