ಮೋದಿಗೆ ಸರಿಸಾಟಿಯಾಗಿರುವ ನಾಯಕ ಸಿದ್ದರಾಮಯ್ಯ ಒಬ್ಬರೇ ಎಂದ ಕಾಂಗ್ರೆಸ್ ನಾಯಕ !

ಚಿಕ್ಕಬಳ್ಳಾಪುರ : ಬಜೆಟ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಸುಧಾಕರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ನಂದಿಗ್ರಾಮದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಿಂದ ಪ್ರತ್ಯೇಕ ಬಜೆಟ್ ಮಂಡಿಸುವ ಅಗತ್ಯ ಇಲ್ಲ. ಸಿದ್ದರಾಮಯ್ಯನವರು ಕೊಟ್ಟ ಕಾರ್ಯಕ್ರಮಗಳು ಮುಂದುವರೆಯಲಿ. ಅದರ ಜೊತೆಗೆ ಕುಮಾರಸ್ವಾಮಿಯವರು ಬೇಕಾದ್ರೇ ಬೇರೆ ಕಾರ್ಯಕ್ರಮ ಗಳನ್ನೂ ಸೇರಿಸಲಿ ಎಂದಿದ್ದಾರೆ.

ಕಾಂಗ್ರೆಸ್ ಗೆ 80 ಸ್ಥಾನ ಬರಲು ಸಿದ್ದರಾಮಯ್ಯನವರ ಪರಿಶ್ರಮ ಕಾರಣ. ಸಿದ್ದರಾಮಯ್ಯ ನವರನ್ನು ಯಾರೂ ಲಘುವಾಗಿ ನೋಡವುದು ಬೇಡ. 13 ಬಾರಿ ಬಜೆಟ್ ಮಂಡಿಸಿರುವ ಸಾಧನೆ ಸಿದ್ದರಾಮಯ್ಯ ನವರದ್ದು.  ಅವರ ಭಾವನೆಗಳಿಗೆ ಸ್ಪಂದಿಸಿದರೆ ಸಮ್ಮಿಶ್ರ ಸರ್ಕಾರಕ್ಕೆ ಓಳ್ಳೆಯದು. ಸಿದ್ದರಾಮಯ್ಯ ಹೇಳಿರುವುದರಲ್ಲಿ ಯಾವುದು ತಪ್ಪು ಇಲ್ಲ. ಕುಮಾರಸ್ವಾಮಿ ಯವರು ಸಪ್ಲಿಮೆಂಟರಿ ಬಜೆಟ್ ಮಂಡಿಸಬಹುದು ಎಂದಿದ್ದಾರೆ.

ಜೆಡಿಎಸ್ ನವರಿಗೆ ಕುಮಾರಸ್ವಾಮಿ ಸಿಎಂ ಆಗಿರೋದು ಮನೋಸ್ಥೈರ್ಯ ತಂದಿದೆ.  ಜೆಡಿಎಸ್ ನವರು ಹೊಸ ಉಡುಗೆಗಳನ್ನು ತೊಟ್ಟು ಸಂತೋಷ ವ್ಯಕ್ತಪಡಿಸ್ತಾರೆ. ಕಾಂಗ್ರೆಸ್ ನವರು ಗೆದ್ದು ಸಹ ಕಾಂಗ್ರೆಸ್ ಮುಖ್ಯಮಂತ್ರಿ ಇಲ್ಲದಿರುವುದು ಹತಾಶೆ ತಂದಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯ ಆದ್ರೆ ಸಮ್ಮಿಶ್ರ ಸರ್ಕಾರಕ್ಕೆ ಅಪಾಯ. ಸಿದ್ದರಾಮಯ್ಯ ನವರನ್ನು ಸೈಡ್ ಲೈನ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಮೋದಿಯವರಿಗೆ ಸರಿ ಸಾಟಿಯಾದ ನಾಯಕ ಸಿದ್ದರಾಮಯ್ಯ ಒಬ್ಬರೇ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com