ಚಿಕಿತ್ಸೆ ನೀಡಲು ಹೋಗಿ ಮಗುವಿನ ಮರ್ಮಾಂಗಕ್ಕೇ ಕತ್ತರಿ ಹಾಕಿದ ವೈದ್ಯ…!

ಬೀದರ್ :  ಖಾಸಗಿ ಆಸ್ಪತ್ರೆ ವೈದ್ಯನ ಎಡವಟ್ಟಿಗೆ ಬಾಲಕನ ಮರ್ಮಾಂಗವೇ ಕಟ್‌ ಆದ ಘಟನೆ ನಡೆದಿದೆ. ಬಿಇಎಂಎಸ್‌ನ ವೈದ್ಯನೊಬ್ಬ ಎರಡು  ವರ್ಷದ ಮಗುವಿನ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ್ದಾನೆ.

ಬೀದರ್‌ ಜಿಲ್ಲೆಯ ಔರಾದ್‌ ಪಟ್ಟಣದ ಕಾಡೋದೆಯಲ್ಲಿ ಮಲ್ಲಿಕಾರ್ಜುನ ಕಾಡದೆ ಎಂಬಾತ ಅನಧಿಕೃತ ಕ್ಲಿನಿಕ್ ಇಟ್ಟುಕೊಂಡಿದ್ದ. ಗುಂಡಮ್ಮ ಹಾಗೂ ದಶರಥ ದಂಪತಿಯ ಎರಡು ವರ್ಷದ ಮಗುವಿಗೆ ಗುಪ್ತಾಂಗದಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಗುವನ್ನು ಪೋಷಕರು ಮಲ್ಲಿಕಾರ್ಜುನನ ಬಳಿ ಕರೆದುಕೊಂಡು ಬಂದಿದ್ದರು. ಮರ್ಮಾಂಗದಲ್ಲಿ ತೊಂದರೆ ಇದೆ. ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ವೈದ್ಯ ಹೇಳಿದ್ದಾನೆ. ಇದಕ್ಕೆ ಪೋಷಕರು ಒಪ್ಪಿದ್ದಾರೆ.

ಬಳಿಕ ವೈದ್ಯ ಶಸ್ತ್ರಚಿಕಿತ್ಸೆ ಮಾಡಿದ್ದು, ಈ ವೇಳೆ ಬಾಲಕನ ಮರ್ಮಾಂಗವನ್ನೇ ಕತ್ತರಿಸಿದ್ದಾನೆ. ಇದನ್ನು ತಿಳಿದು ಪೋಷಕರು ವೈದ್ಯನ ವಿರುದ್ಧ ಆಸ್ಪತ್ರೆ ಎದುರು ಗಲಾಟೆ ಮಾಡಿದ್ದು, ವೈದ್ಯನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿದ್ದು, ವೈಧ್ಯ ಮಲ್ಲಿಕಾರ್ಜುನ ಕಾಡೋದೆ ಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಗಾಯಾಳು ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published.