ಜನರಿಗೆ ಗೊತ್ತಿಲ್ಲದೆಯೇ ಅನಿತಾ ಕುಮಾರಸ್ವಾಮಿಯವರನ್ನು ಮಾಜಿ ಪ್ರಧಾನಿ ಮಾಡಿದ ಜೆಡಿಎಸ್‌ ಮುಖಂಡ ?!!!

ಬೆಂಗಳೂರು : ಅನಿತಾ ಕುಮಾರಸ್ವಾಮಿಯವರಿಗೆ ಸ್ವಾಗತ ಕೋರಿದ್ದ ಫ್ಲೆಕ್ಸ್‌ವೊಂದರಲ್ಲಿನ ಪ್ರಮಾದ ಈಗ ಸೋಶಿಯಲ್ ಮೀಡಿಯಾದಲ್ಲಿ ಬಾರೀ ವೈರಲ್ ಆಗಿದೆ.

ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ ಪಿ.ವಿ .ಎಸ್‌ ಪ್ರಸಾದ್ ಅವರು ಈ ಫ್ಲೆಕ್ಸ್ ಮಾಡಿಸಿದ್ದಾರೆನ್ನಲಾಗಿದ್ದು, ಈ ಫೆಕ್ಸ್‌ನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸೊಸೆ ಅನಿತಾ ಕುಮಾರಸ್ವಾಮಿಯವರನ್ನು ಮಾಜಿ ಪ್ರಧಾನಿ ಅನಿತಾ ಕುಮಾರಸ್ವಾಮಿ ಎಂದು ಬರೆಯಲಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.

ಪ್ರಸಾದ್‌ ವೀರಪ್ಪ ಹೆಸರಿನ ಏಜೆನ್ಸಿಯೊಂದನ್ನು ಜೂನ್‌ 24ರಂದು ಉದ್ಘಾಟನೆ ಮಾಡಲಾಗುತ್ತಿದ್ದು,  ಅದಕ್ಕೆ ಅನಿತಾ ಕುಮಾರಸ್ವಾಮಿ ಆ ಗಮಿಸುತ್ತಿದ್ದಾರೆ. ಅವರಿಗೆ ಸ್ವಾಗತ ಕೋರುವ ಭರಾಟೆಯಲ್ಲಿ ಫ್ಲೆಕ್ಸ್‌ ತಯಾರಕರು ಸಮಾರಂಭಕ್ಕೆ ಆಗಮಿಸುತ್ತಿರುವ ಮಾಜಿ ಪ್ರಧಾನಿಗಳಾದ  ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರಿಗೆ ಹೃತ್ಪೂರ್ವಕ ಸ್ವಾಗತ ಎಂದು ಹಾಕಲಾಗಿದೆ. ಅಲ್ಲದೆ ಒಂದು ಬದಿಗೆ ಅನಿತಾ ಕುಮಾರಸ್ವಾಮಿಯವರ ಫೋಟೋವನ್ನು ಹಾಕಲಾಗಿದ್ದು, ಮಾಜಿ ಎಂಎಲ್‌ಎ ಎಂದು ಹಾಕಲಾಗಿದೆ.

Leave a Reply

Your email address will not be published.