ದೇವರು ಬಾರೀ ಡೇಂಜರ್‌. ಅವನನ್ನು ಯಾರೂ ನಂಬಬೇಡಿ : ವಿವಾದ ಸೃಷ್ಠಿಸಿದ ನಿಜಗುಣಾನಂದ ಸ್ವಾಮೀಜಿ

ಬಾಗಲಕೋಟೆ : ರೈತರ ಸಾಲ ಮನ್ನಾ ವಿಚಾರ ಸಂಬಂಧ ಬಾದಾಮಿಯಲ್ಲಿ ನಿಜಗುಣಾನಂದ ಸ್ವಾಮೀಜಿ ವಿವಾದಿತ ಹೇಳಿಕೆ ನೀಡಿದ್ದಾರೆ.

ಬಾದಾಮಿಯ ಸ್ಮಶಾನದಲ್ಲಿ ನಡೆದ ಮರಣವೇ ಮಹಾನವಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಸಾಲಮನ್ನಾ ಮಾಡಲಿ ಎಂದು ರೈತರು ದೇವರ ಮುಂದೆ ಹೇಳುತ್ತಾರೆ. ಆದರೆ ದೇವರು ಮಗನ(ರೈತ) ನಿನಗ ಸಾಲ ಮಾಡು ಎಂದವರು ಯಾರು ಎಂದು ದೇವರು ಕೇಳ್ತಾನೆ. ದೇವರು ಬಹಳ ಡೇಂಜರ್ ಇದ್ದಾನೆ. ಅವನನ್ನು ಯಾರೂ ನಂಬಬೇಡಿ. ನಾಲ್ಕು ಪ್ಯಾಂಟ್-ಶರ್ಟ್, 1 ರೊಟ್ಟಿ, ಒಂದಿಷ್ಟು ಲೋಟಾ ಹಾಲು. ಮಲಗೋಕೆ ಅರ್ಧ ಮಂಚ ಈ ಕಡೆ ತಿರುಗಿದ್ರೆ ಆ ಕಡೆಯಿಲ್ಲ. 60 ಆದ್ಮೇಲೆ ಶುಗರ್, ಬಿಪಿ ಅಷ್ಟೇ ಎಂದಿದ್ದಾರೆ.

ರೈತ ನೀನು ಸಾಲ ಯಾಕೆ ಮಾಡಿದೆ. ಇಸ್ಪೀಟ್‌ ಆಡೋದ್ರಿಂದ ಸಾಲ ಮಾಡಿದೆ. ಚಟಕ್ಕಾಗಿ ಸಾಲ ಮಾಡಿದೆ. ದೊಡ್ಡಸ್ಥನ ಮಾಡಲು ಹೋಗಿ ಸಾಲ ಮಾಡಿದೆ. ಈಗ ನೀನು ಉರುಳು ಹಾಕೊಂಡ್ರೆ ನಾನೇನು ಮಾಡ್ಲಿ ಎಂದು ದೇವರು ಕೇಳುತ್ತಾನೆ. ಎಲ್ಲಾ ಕಷ್ಟಕ್ಕೂ  ದೇವರು ಪರಿಹಾರ ಕೊಡುವ  ಹಾಗಿದ್ದರೆ ರೈತರ ಪರಿಹಾರಕ್ಕೂ ಕೊಡಲಿ ನೋಡೋಣ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com