ಮುಸ್ಲಿಮರೆಲ್ಲ ಮುಸ್ಲಿಮ್ ಅಭ್ಯರ್ಥಿಗಳಿಗೆ ವೋಟ್ ಮಾಡಿ ಗೆಲ್ಲಿಸಿ : ಅಸಾದುದ್ದೀನ್ ಓವೈಸಿ

‘ಮುಸ್ಲಿಮರು ಮುಸ್ಲಿಮ್ ಅಭ್ಯರ್ಥಿಗಳಿಗಾಗಿ ವೋಟ್ ಮಾಡಬೇಕು ‘ ಎಂದು ಎಐಎಮ್ ಐಎಮ್ ಮುಖಂಡ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಸೋಮವಾರ ಭಾಷಣ ಮಾಡಿದ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗೋ ಸಾಗಾಣಿಕೆಯ ಆರೋಪದ ಮೇಲೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಹತ್ಯೆಗೊಳಗಾದ ಕಾಸಿಮ್ ಕುರಿತು ಪ್ರಸ್ತಾಪಿಸಿ ಮಾತನಾಡಿದ ಓವೈಸಿ  ‘ ಕಾಸಿಮ್ ಸಾವು ಗಂಭೀರವಾಗಿ ಯೋಚಿಸುವಂತೆ ಮಾಡಿದೆ. ಆದರೆ ನಾನು ನಿಮಗೆ ಕಣ್ಣೀರು ಹಾಕಬೇಕೆಂದು ಕೇಳುತ್ತಿಲ್ಲ. ನಾನು ನಿಮ್ಮ ಆತ್ಮಸಾಕ್ಷಿಯು ಜಾಗೃತವಾಗಲಿ ಎಂದು ಅಪೇಕ್ಷಿಸುತ್ತೇನೆ. ಜ್ಯಾತ್ಯಾತೀತತೆಯ ಬಗ್ಗೆ ಮಾತನಾಡುವ ಇವರುಗಳೆಲ್ಲ ದೊಡ್ಡ ಡಕಾಯಿತರಾಗಿದ್ದಾರೆ, ಅವಕಾಶವಾದಿಗಳಾಗಿದ್ದಾರೆ. ಅವರು ಮುಸ್ಲಿಮರನ್ನು 70 ವರ್ಷಗಳ ಕಾಲ ಬಳಸಿಕೊಂಡಿದ್ದಾರೆ, ಹೆದರಿಸಿದ್ದಾರೆ, ಸುಮ್ಮನಿರುವಂತೆ ಒತ್ತಡ ಹೇರಿದ್ದಾರೆ ‘ ಎಂದಿದ್ದಾರೆ.

‘ ನೀವು ಈಗ ನಿಮ್ಮ ಹಕ್ಕುಗಳಿಗಾಗಿ ಹೋರಾಡಬೇಕಾಗಿದೆ. ಜ್ಯಾತ್ಯಾತೀತತೆ ಉಳಿಬೇಕೆಂಬುದು ನಿಮ್ಮ ಇಚ್ಛೆಯಿದ್ದರೆ, ನಿಮಗಾಗಿ ಹೋರಾಟ ನಡೆಸಿ, ಪ್ರಬಲ ರಾಜಕೀಯ ಶಕ್ತಿಯಾಗಿ ನಿರ್ಮಾಣಗೊಳ್ಳಬೇಕು. ಮುಸ್ಲಿಮರೆಲ್ಲ ವೋಟ್ ಮಾಡಿ ಚುನಾವಣೆಯಲ್ಲಿ ನಿಮ್ಮ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಬೇಕು ‘ ಎಂದು ಹೇಳಿದ್ದಾರೆ.

4 thoughts on “ಮುಸ್ಲಿಮರೆಲ್ಲ ಮುಸ್ಲಿಮ್ ಅಭ್ಯರ್ಥಿಗಳಿಗೆ ವೋಟ್ ಮಾಡಿ ಗೆಲ್ಲಿಸಿ : ಅಸಾದುದ್ದೀನ್ ಓವೈಸಿ

Leave a Reply

Your email address will not be published.