Cricket : ಭಾರತದ ವಿಶ್ವಕಪ್ ಗೆಲುವಿಗೆ 35ರ ಸಂಭ್ರಮ : 1983ರಲ್ಲಿ ಕಪಿಲ್ ದೇವ್ ಬಳಗದ ಸಾಧನೆ

1983ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ಮೊದಲ ಬಾರಿಗೆ ಚಾಂಪಿಯನ್ ಆಗಿತ್ತು. ಫೈನಲ್ ಪಂದ್ಯದಲ್ಲಿ ಬಲಿಷ್ಟ ವೆಸ್ಟ್ ಇಂಡೀಸ್ ತಂಡವನ್ನು 43 ರನ್ ಗಳಿಂದ ಸೋಲಿಸಿದ್ದ ಭಾರತ ಪ್ರುಡೆನ್ಶಿಯಲ್ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದು ಇತಿಹಾಸ ನಿರ್ಮಿಸಿತ್ತು.

Image result for kapil dev 1983

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ 1983ರ ಜೂನ್ 25ರಂದು ಕ್ರಿಕೆಟ್ ಕಾಶಿಯೆಂದೇ ಖ್ಯಾತಿಯಾಗಿರುವ ಲಾರ್ಡ್ಸ್ ಅಂಗಳದಲ್ಲಿ ಫೈನಲ್ ಪಂದ್ಯ ನಡೆದಿತ್ತು. ಇಂದಿಗೆ ಭಾರತ ಮೊಟ್ಟ ಮೊದಲ ಸಲ ವಿಶ್ವ ಚಾಂಪಿಯನ್ ಆಗಿ ಬರೋಬ್ಬರಿ 35 ವರ್ಷಗಳು ಕಳೆದಿವೆ.

Related image

ವಿಂಡೀಸ್ ತಂಡದ ದಿಗ್ಗಜ ಬ್ಯಾಟ್ಸಮನ್ ವಿವಿಯನ್ ರಿಚರ್ಡ್ಸ್ ಅವರ ಕ್ಯಾಚನ್ನು ನಾಯಕ ಕಪಿಲ್ ದೇವ್ ಹಿಡಿದ ಅದ್ಭುತ ಕ್ಷಣ ಇಂದಿಗೂ ಅಭಿಮಾನಿಗಳ ಪಾಲಿಗೆ ಅವಿಸ್ಮರಣೀಯವಾಗಿದೆ.

ಅದಾಗಿ 28 ವರ್ಷಗಳ ಬಳಿಕ 2011ರಲ್ಲಿ ಮಹೇಂದ್ರ ಸಿಂಗ್ ನೇತೃತ್ವದ ಭಾರತ ತಂಡ ಮತ್ತೊಮ್ಮೆ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿತ್ತು.

 

Leave a Reply

Your email address will not be published.

Social Media Auto Publish Powered By : XYZScripts.com