WATCH : ಧೋನಿ-ಕೊಹ್ಲಿ ಜೋಡಿಗೆ ಹೊಸ ಹೆಸರು ನೀಡಿದ ಧವನ್ : ಏನದು..?

ಟೀಮ್ ಇಂಡಿಯಾದಲ್ಲಿ ಪ್ರತಿಯೊಬ್ಬ ಆಟಗಾರನಿಗೂ ಅವರದೇ ಆದ ನಿಕ್ ನೇಮ್ ಗಳಿರುವುದು ನಿಮಗೆಲ್ಲ ಗೊತ್ತಿರುವ ಸಂಗತಿ. ಉದಾಹರಣೆಗೆ ವಿರಾಟ್ ಕೊಹ್ಲಿ – ಚೀಕು,  ಶಿಖರ್ ಧವನ್ – ಗಬ್ಬರ್, ರವೀಂದ್ರ ಜಡೇಜಾ – ಸರ್ ಜಡೇಜಾ, ರೋಹಿತ್ ಶರ್ಮಾ – ಹಿಟ್ ಮ್ಯಾನ್, ಹರಭಜನ್ ಸಿಂಗ್ – ಭಜ್ಜಿ, ಜಹೀರ್ ಖಾನ್ – ಜ್ಯಾಕ್ ಹೀಗೆಲ್ಲ ಹೆಸರುಗಳಿವೆ.

ಮಾಜಿ ಆಟಗಾರರಾದ ರಾಹುಲ್ ದ್ರಾವಿಡ್ ಅವರನ್ನು ಜ್ಯಾಮಿ ಎಂದು, ಸೌರವ್ ಗಂಗೂಲಿಯವರನ್ನು ದಾದಾ ಎಂದೂ, ಅನಿಲ್ ಕುಂಬ್ಳೆಯವರನ್ನು – ಜಂಬೋ ಯುವರಾಜ್ ಸಿಂಗ್ ಅವರನ್ನು ಯುವಿ ಕರೆಯಲಾಗುತ್ತಿತ್ತು.

ಈಗ ಲೇಟೆಸ್ಟ್ ವಿಚಾರ ಏನೆಂದರೆ ಟೀಮ್ ಇಂಡಿಯಾದ ಎಡಗೈ ಆರಂಬಿಕ ಬ್ಯಾಟ್ಸಮನ್ ಶಿಖರ್ ಧವನ್ ಅವರು, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಲಿ ನಾಯಕ ವಿರಾಟ್ ಕೊಹ್ಲಿ ಇಬ್ಬರ ಜೋಡಿಗೆ ಹೊಸ ಹೆಸರುಗಳನ್ನು ನೀಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು ‘ ಮೇರೆ ದೋ ಅನ್ಮೋಲ್ ರತನ್, ಏಕ್ ರಾಮ್ ಔರ್ ದೂಜಾ ಲಖನ್ ‘ ಎಂಬ ಹಿಂದಿ ಹಾಡನ್ನು ಹಾಡಿದ್ದಾರೆ. ಅದರಲ್ಲಿ ಧೋನಿಯನ್ನು ರಾಮ ಎಂದೂ ಕೊಹ್ಲಿಯನ್ನು ಲಕ್ಷ್ಮಣ ಎಂದು ಕರೆದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com