ಖಾಸಗಿ ಆಸ್ಪತ್ರೆ ವೈದ್ಯೆಯ ಯಡವಟ್ಟು : ಅಸಮರ್ಪಕ ಚಿಕಿತ್ಸೆಯಿಂದ ಗರ್ಭಿಣಿಯ ಬಲಗೈ ಕಟ್..

ಖಾಸಗಿ ಆಸ್ಪತ್ರೆ ವೈದ್ಯೆಯೊಬ್ಬರು ಐದು ತಿಂಗಳ ಗರ್ಭಿಣಿಯ ಬಲಗೈ ಕಟ್ ಮಾಡಲೇಬೇಕಾದ ಪರಿಸ್ಥಿತಿಗೆ ಕಾರಣವಾಗಿ ಯಡವಟ್ಟು ಮಾಡಿಕೊಂಡಿದ್ದಾರೆ. ರಕ್ತ ವಿತರಿಸುವ ವೇಳೆ ಅಸಮರ್ಪಕ ಚಿಕಿತ್ಸೆಯಿಂದಾಗಿ ಗುಳ್ಳೆ ಎದ್ದು ಕೈಗೆ ಬಾವು ಬಂದಿದೆ. ಬ್ಲಡ್ ಅಳವಡಿಕೆ ವೇಳೆ ನಂಜು ಕಾಣಿಸಿಕೊಂಡು ಗ್ಯಾಂಗ್ರಿನ್ ಆಗಿ ಬದಲಾಗಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಕೆರೂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಗರ್ಭಿಣಿಯ ಪ್ರಾಣ ಉಳಿಸಲು ವೈದ್ಯರು ಕೈ ಕಟ್ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆ ಇಳಕಲ್ ನಗರದ ಸಂಜೀವಿನಿ ಶಾವಿ ಆಸ್ಪತ್ರೆ ವೈದ್ಯೆ ಶೋಭಾ ಅವರಿಂದ ಯಡವಟ್ಟು ಆಗಿದೆ.

ಕೈ ಕಟ್ ಆಗುವಂತಹ ಪತಿಸ್ಥಿತಿಗೆ ಕಾರಣವಾಗಿರುವ ವೈದ್ಯೆ ಶೋಭಾ ಶಾವಿ ಅವರ ಮೇಲೆ ಗರ್ಭಿಣಿ ಸಂಬಂಧಿಕರ ಆಕ್ರೋಶ ವ್ಯಕ್ತವಾಗಿದೆ. ವೈದ್ಯೆಯ ವಿರುದ್ಧ ದೂರು ಕೊಡಲು ಸಂಬಂಧಿಕರು ಮುಂದಾಗಿದ್ದಾರೆ.

ಶಿಲ್ಪಾ ಭಜಂತ್ರಿ 21ಕೈ ಕಳೆದುಕೊಂಡಿದ್ದಾರೆ. ಗರ್ಭಿಣಿ ಶಿಲ್ಪಾ ಇಳಕಲ್ ತಾಲ್ಲೂಕಿನ ಚಿಕ್ಕಕೊಡಗಲಿ ಗ್ರಾಮದ ನಿವಾಸಿಯಾಗಿದ್ದಾರೆ. ಸದ್ಯ ಬಾಗಲಕೋಟೆ ಕೆರೂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.  ಗರ್ಭಿಣಿ ಶಿಲ್ಪಾ ಭಜಂತ್ರಿ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅಪಾಯದಿಂದ ಪಾರು ಎಂದು ವೈದ್ಯರ ಸ್ಪಷ್ಟನೆ ನೀಡಿದ್ದಾರೆ.

ಜೂನ್ 4 ರಂದು ಜ್ವರ ಬಂದ ಹಿನ್ನೆಲೆ ಸಂಜೀವಿನಿ ಶಾವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 6 ರಂದು ರಕ್ತ ಅಳವಡಿಸಲಾಗಿತ್ತು. ಜೂನ್ 8 ರಂದು ಡಿಶ್ಚಾರ್ಜ್ ಮಾಡಿದ್ದರು. 3 ತಾಸಿನ ನಂತರ ಬಾವು ಬಂದಿದೆ. ಜೂನ್ 9ರಂದು ಪುನಃ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಗುಳ್ಳೆ ತೆಗೆಯಲು ಆಪರೇಷನ್ ಮಾಡಿದ್ದರು. ಆಪರೇಷನ್ ಬಳಿಕ‌ ನಂಜಾಗಿ ಗುಳ್ಳೆ ಬಾವು ಕಾಣಿಸಿಕೊಂಡಿತ್ತು.

Leave a Reply

Your email address will not be published.

Social Media Auto Publish Powered By : XYZScripts.com