ಹಜ್ ಭವನಕ್ಕೆ ಟಿಪ್ಪು ಬದಲು ಅಬ್ದುಲ್ ಕಲಾಂ ಹೆಸರಿಡಲಿ : ಪ್ರಹ್ಲಾದ್ ಜೋಶಿ

ಹುಬ್ಬಳ್ಳಿಯಲ್ಲಿ ಭಾರತೀ ಜನತಾ ಪಕ್ಷದ ಸಂಸದ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ. ‘ ಟಿಪ್ಪು ಒಬ್ಬ ಮತಾಂಧ, ಸಮಾಜ ದ್ರೋಹಿ. ಟಿಪ್ಪು‌ಸುಲ್ತಾನ್ ಹೆಸರು ಹಜ್ ಭವನಕ್ಕೆ ಇಡಬಾರದು. ಟಿಪ್ಪು ಹೆಸರಿನ ಬದಲು ಹಜ್ ಭವನಕ್ಕೆ ಅಬ್ದುಲ್ ಕಲಾಂ ಹೆಸರಿಡಲಿ. ಅದಕ್ಕೂ ಒಳ್ಳೆಯದಾಗುತ್ತೆ, ಹಜ್ ಯಾತ್ರೆ ಹೋದವರಿಗೂ ಒಳ್ಳೆಯದಾಗುತ್ತೆ ‘ ಎಂದಿದ್ದಾರೆ.

ಮೊದಲು ಬಿಜೆಪಿಯವರೇ ಒಪ್ಪಿಗೆ ನೀಡಿದ್ದಾರೆ ಅನ್ನೋ‌ ಸಚಿವ ಜಮೀರ್ ಹೇಳಿಕೆ ವಿಚಾರ. ಕೆಲವರು ತಪ್ಪು ತಿಳುಳಿಕೆಯಿಂದ ಆ ರೀತಿ‌ ಮಾಡಿರಬಹುದು. ಸಿದ್ದರಾಮಯ್ಯ ರೀತಿ ಕುಮಾರಸ್ವಾಮಿ ಮಾಡಬಾರದು, ಅವರಿಗೆ ಏನಾಗಿದೆ ಅಂತಾ ಗೊತ್ತು.

ಕಾವೇರಿ ಪ್ರಾಧಿಕಾರ ರಚನೆ ವಿಚಾರವಾಗಿ ಮಾತನಾಡಿದ ಅವರು ‘ ಸುಪ್ರೀಂಕೋಟ್೯ ಕೇಂದ್ರಕ್ಕೆ ಗಡುವು ನೀಡಿತ್ತು. ಹಾಗಾಗಿ‌ ಸುಪ್ರೀಂಕೋಟ್೯ ಆದೇಶದಂತೆ ಕಾವೇರಿ ಪ್ರಾಧಿಕಾರ ರಚನೆ‌ ಮಾಡಲಾಗಿದೆ ‘ ಎಂದು ಹುಬ್ಬಳ್ಳಿಯಲ್ಲಿ ಸಂಸದ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com