Facebook Love : 27ರ ತರುಣನನ್ನು ಮದುವೆಯಾದ 65 ವರ್ಷದ ಅಜ್ಜಿ..!

ಚಂಡೀಘಡ : ಫೇಸ್​ ಬುಕ್​ನಲ್ಲಿ ಹಲವಾರು ಮಂದಿ ಪರಸ್ಪರ ಪರಿಚಯವಿಲ್ಲದವರು ಲವ್​ ಮಾಡಿ ಮದುವೆ ಆಗಿರುವುದು ನೋಡಿದ್ದೇವೆ ಹಾಗೂ ಎಷ್ಟೋಂದು  ಜನರು ಫೇಸ್​ಬುಕ್​  ಹೆಸರಿನಲ್ಲಿ ಮೋಸ ಮಾಡಿರುವುದ್ದನ್ನು ನೋಡಿದ್ದೇವೆ. ಆದರೆ ಪ್ರೀತಿ ಕುರುಡು ಎಂಬ ಮಾತಿನಂತೆ ಫೇಸುಬುಕ್‌ನಲ್ಲಿ  27 ರ ಯುವಕ 65 ರ ಅಜ್ಜಿ  ಲವ್‌ ಮಾಡಿ ಮದುವೆಯಾಗಿದ್ದಾರೆ.

ಇಂಥದೊಂದು ಅಪರೂಪದ ಘಟನೆ  ಹರಿಯಾಣದ ಕಾತಿಹಾಳ ಎಂಬ ಹಳ್ಳಿಯಲ್ಲಿ  ನಡೆದಿದೆ.  ಅಮೆರಿಕದ ಮಹಿಳೆ ಕೆರೇನ್‌ ಲಿಲಿಯಾನ್‌ ಮತ್ತು ಪ್ರವೀಣ್‌ ಫೇಸ್​ ಬುಕ್​ನಲ್ಲಿ ಮೊದಲು ಸ್ನೇಹಿತರಾಗಿದ್ದ ಇಬ್ಬರೂ ಬಳಿಕ ಪರಸ್ಪರ ಪ್ರೀತಿಸಿ,  ವಿವಾಹವಾಗಲು ನಿರ್ಧರಿಸಿ ಹೊಸ ಬಾಳಿಗೂ ಕಾಲಿಟ್ಟಿದ್ದಾರೆ.

Image result for 65 woman married 27 man

ಪ್ರವೀಣ್‌ ಹಿಂದು ಆಗಿದ್ದು ಕೆರೇನ್‌ ಕ್ರಿಶ್ಚಿಯನ್‌ ಧರ್ಮೀಯರು ,ಆದರೆ ವಿವಾಹ ಮಾತ್ರ ಸಿಖ್ಬ್‌ ಸಂಪ್ರದಾಯದಂತೆ ಮಾಡಿಕೊಂಡಿರುವುದು ಮತ್ತೋಂದು ವಿಶೇಷ. ಪ್ರವೀಣ್‌ ಸ್ನಾತಕೋತ್ತರ ಪದವೀಧರನಾದ ಹೊರತಾಗಿಯೂ ಸರಿಯಾದ ಕೆಲಸ ಸಿಗದ ಕಾರಣ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.

ಇದೀಗ  ಭಾರತಕ್ಕೆ ವಿವಾಹವಾಗಲು ಆಗಮಿಸಿದ್ದ ಕೆರೇನ್‌ ಪ್ರವೀಣ್‌ರನ್ನು ಅಮೆರಿಕಕ್ಕೆ ಕರೆದೊಯ್ದಿದ್ದು ಅಲ್ಲಿನ ವೀಸಾ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ವೀಸಾ ಸಿಕ್ಕರೆ ಪ್ರವೀಣ್‌ ಅಮೆರಿಕದಲ್ಲಿ ನೆಲೆಸಲಿದ್ದು, ಇಲ್ಲವಾದರೆ ಕೆರೇನ್‌ ಭಾರತಕ್ಕೆ ಬಂದು ನೆಲೆಸಲಿದ್ದಾರೆ..

 

Leave a Reply

Your email address will not be published.

Social Media Auto Publish Powered By : XYZScripts.com