FIFA 2018 : ಜರ್ಮನಿಗೆ ಮೊದಲ ಗೆಲುವಿನ ಸಂಭ್ರಮ : 2ನೇ ಜಯ ದಾಖಲಿಸಿದ ಮೆಕ್ಸಿಕೊ

ಫಿಫಾ ವಿಶ್ವಕಪ್-2018 ಟೂರ್ನಿಯಲ್ಲಿ ಶನಿವಾರ ಫಿಸ್ಟ್ ಕ್ರೀಡಾಂಗಣದಲ್ಲಿ ನಡೆದ ‘ಎಫ್’ ಗುಂಪಿನ ಲೀಗ್ ಪಂದ್ಯದಲ್ಲಿ ಸ್ವೀಡನ್ ವಿರುದ್ಧ ಜರ್ಮನಿ 2-1 ಗೋಲುಗಳ ಅಂತರದ ಗೆಲುವು ಸಾಧಿಸಿದೆ. ಜರ್ಮನಿ ಪರವಾಗಿ ಫಾರ್ವರ್ಡ್ ಆಟಗಾರ ಮಾರ್ಕೊ ರಿಯುಸ್ (48″) ಹಾಗೂ ಮಿಡ್ ಫೀಲ್ಡರ್ ಟೋನಿ ಕ್ರೂಸ್ (90+5″) ಗೋಲ್ ದಾಖಲಿಸಿದರು.

ಶನಿವಾರ ಸ್ಪಾರ್ಟಕ್ ಮೈದಾನದಲ್ಲಿ ನಡೆದ ‘ಜಿ’ ಗುಂಪಿನ ಲೀಗ್ ಪಂದ್ಯದಲ್ಲಿ ಟ್ಯುನಿಶಿಯಾ ವಿರುದ್ಧ ಬೆಲ್ಜಿಯಂ ತಂಡ 5-2 ಗೋಲ್ ಅಂತರ ಭರ್ಜರಿ ಜಯ ಗಳಿಸಿದೆ. ಬೆಲ್ಜಿಯಂ ಪರವಾಗಿ ಫಾರ್ವರ್ಡ್ ಆಟಗಾರರಾದ ಈಡನ್ ಹಜಾರ್ಡ್ (6″ & 51″), ರೊಮೆಲು ಲುಕಾಕು (16″ & 45+3″), ಮಿಚಿ ಬ್ಯಾಟ್ಶುಯಾಯ್ (90″) ಗೋಲ್ ದಾಖಲಿಸಿದರು.

ರೊಸ್ಟೊವ್ ಅರೆನಾದಲ್ಲಿ ಶನಿವಾರ ನಡೆದ ‘ಎಫ್’ ಗುಂಪಿನ ಲೀಗ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಮೆಕ್ಸಿಕೊ 2-1 ಗೋಲ್ ಗಳಿಂದ ಜಯ ಗಳಿಸಿದೆ. ಮೆಕ್ಸಿಕೊ ಪರವಾಗಿ ಫಾರ್ವರ್ಡ್ ಆಟಗಾರರಾದ ಕಾರ್ಲೊಸ್ ವೆಲಾ (26″) ಜೇವಿಯರ್ ಹೆರ್ನಾಂಡಜ್ (66″) ಗೋಲ್ ಬಾರಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com