ಗೆದ್ದ “ಕಾಮಿಡಿ” ಕಿಲಾಡಿಗಳು : ಗ್ರ್ಯಾಂಡ್‌ ಫಿನಾಲೆಯಲ್ಲಿ ಪಸರಿಸಿದ ನಗುವಿನ ಘಮಲು

ರಿಯಾಲಿಟಿ ಶೋಗಳ ಮೂಲಕವೇ ಹೆಚ್ಚಿನ ಜನರ ಮನಗೆದ್ದಿರುವ ಝೀ ಕನ್ನಡ ವಾಹಿನಿ ಹೊಸ ಮೈಲುಗಲ್ಲನ್ನು ಸೃಷ್ಠಿಸಿದೆ. ಸಾಮಾಜಿಕ ಬದ್ದತೆಯನ್ನು ಉಳಿಸಿಕೊಳ್ಳುವುದರ ಜೊತೆ ಜನರಿಗೂ ಇಷ್ಟವಾಗುವಂತಹ ಕಾರ್ಯಕ್ರಮಗಳನ್ನು ನೀಡುತ್ತಾ ಮುಂದೆ ಸಾಗುತ್ತಿದ್ದು, ಸರಿಗಮಪ, ಡ್ರಾಮಾ ಜೂನಿಯರ್ಸ್‌, ವೀಕೆಂಡ್ ವಿತ್ ರಮೇಶ್‌, ಕಾಮಿಡಿ ಕಿಲಾಡಿಗಳಂತಹ ಹಿಟ್ ಶೋಗಳನ್ನು ನೀಡಿ ಯಶಸ್ಸು ಸಾಧಿಸಿದೆ.

ವಾಹಿನಿಯ ಈ ಕಾರ್ಯಕ್ರಮಗಳಲ್ಲಿ ಹಾಸ್ಯಕ್ಕೆ ಮನೆಮಾತಾದ ಮತ್ತು ಅತಿ ಹೆಚ್ಚು ಜನಮನ್ನಣೆ ಗಳಿಸಿದ “ಕಾಮಿಡಿ ಕಿಲಾಡಿಗಳು ಸೀಸನ್ 2” ಫಿನಾಲೆ ಕಳೆದ “ಭಾನುವಾರ ದಿನಾಂಕ 17.06.2018 ರಂದು ವಿಜಯಪುರದ ಡಾ: ಬಿ,ಆರ್ ಅಂಬೇಡ್ಕರ್ ಕ್ರೀಡಾಂಗಣ” ದಲ್ಲಿ ನಡೆದಿದೆ.

ಪುಂಗಿನಾದ, ವಾಯ್ಸ್‌ ಪ್ರಾಬ್ಲಮ್‌, ದಿ ವಿಲನ್‌ ಸ್ಕಿಟ್‌ಗಳ ಮೂಲಕ ಜನರನ್ನು ಕಿಲಾಡಿಗಳು ನಗೆಗಡಲಲ್ಲಿ ತೇಲಿಸಿದ್ದಲ್ಲದೆ, ರಾಜು ತಾಳಿಕೋಟೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ವರ್ಣರಂಜಿತ ಸಂಜೆಯಲ್ಲಿ ಆರಂಭಗೊಂಡ ಕಿಲಾಡಿ ವೇದಿಕೆಯ ಆರ್ಭಟ ಮರುದಿನ ಮುಂಜಾನೆ ವೇಳೆಗೆ “ಕಾಮಿಡಿ ಕಿಲಾಡಿಗಳು ಸೀಸನ್ 2” ಕಿಲಾಡಿ ಪಟ್ಟ ಯಾರ ಪಾಲಿಗೆ” ಎಂಬುದನ್ನು ಘೋಷಣೆ ಮಾಡುವುದರ ಮೂಲಕ ಮುಕ್ತಾಯಗೊಂಡಿತ್ತು.

ಹಾಗಾದರೆ ಕಾಮಿಡಿ ಕಿಲಾಡಿಗಳು ಸೀಸನ್‌ 2ರ ವಿನ್ನರ್‌ ಯಾರು ಎಂಬ ಕುತೂಹಲ ದ ಪ್ರಶ್ನೆಗೆ ಇದೇ ಭಾನುವಾರ ಉತ್ತರ ಸಿಗಲಿದೆ.

Leave a Reply

Your email address will not be published.