35 ವರ್ಷಗಳಿಂದ ಉ.ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಕಾಂಗ್ರೆಸ್ ಸರಿಪಡಿಸಬೇಕು : ಜಾರಕಿಹೊಳಿ

ಬೆಳಗಾವಿಯಲ್ಲಿ ಶಾಸಕ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ‘ ನಮ್ಮ ಗುಂಪಿನಿಂದ ನನಗೆ ಕೆಪಿಸಿಸಿ ಅಧ್ಯಕ್ಷನಾಗೋ ಅವಕಾಶ ಇತ್ತು. ಆದರೇ ಸದ್ಯ ಬೇಡ ಮುಂದೆ ನೋಡೊಣ ಎಂದಿದ್ದೇನೆ. ಕೆಪಿಸಿಸಿ ಅಧ್ಯಕ್ಷರು ಯಾರೇ ಆದರೂ ಅವರಿಗೆ ನಮ್ಮ ಬೆಂಬಲವಿದೆ. ಕೆಪಿಸಿಸಿ ಅಧ್ಯಕ್ಷರಾಗಲು 5 ವರ್ಷ ಕಾಲಾವಕಾಶ ಬೇಕು
ರಾಜ್ಯ ಸುತ್ತಬೇಕು ಪಕ್ಷ ಸಂಘಟನೆ ಮಾಡಬೇಕು, ಹುದ್ದೆಯಿಂದಲೇ ಪಕ್ಷ ಸಂಘಟನೆ ಮಾಡೋ ಅವಶ್ಯಕತೆ ಇಲ್ಲ. ನನಗೆ ರಾಜ್ಯದಲ್ಲಿ ಸತೀಶ ಜಾರಕಿಹೊಳಿ ಅಂತಲೇ ಎಲ್ಲರು ಗುರುತಿಸುತ್ತಾರೆ ‘ ಎಂದಿದ್ದಾರೆ.

‘ ನಿಗಮ ಮಂಡಳಿಗೆ ಬೆಂಬಲಿಗರ ನೇಮಕ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು ‘ ಈಗ ಪಟ್ಟಿ ಸಿದ್ದಪಡಿಸಿ ವೇಣುಗೋಪಾಲ ನೀಡಲಾವುದು ‘ ಎಂದಿದ್ದಾರೆ. ಸಚಿವ ಸಂಪುಟ ರಚನೆಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಮಾತನಾಡಿದ ಅವರು ‘ ನಾವು 40 ಜನ ಶಾಸಕರಿದ್ದು ಕೇವಲ 4 ಜನರಿಗೆ ಸಚಿವಸ್ಥಾನ ಸಿಕ್ಕಿದೆ. 35 ವರ್ಷಗಳಿಂದ ಉತ್ತರ ಕರ್ನಾಟಕ್ಕೆ ನಿರಂತರ ಅನ್ಯಾಯವಾಗಿದೆ. ಈಗ ಕಾಂಗ್ರೆಸ್ ಪಕ್ಷ ಈ ಅನ್ಯಾಯ ಸರಿಪಡಿಸಬೇಕು ‘ ಎಂದಿದ್ದಾರೆ.

‘ ಮುಂದೆ ಯಾವುದೇ ಸರ್ಕಾರ ಬಂದ್ರು ರೀತಿಯ ಅನ್ಯಾಯ ಆಗಬಾರದು. ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕಕ್ಕೆ ಸರಿಸಮನಾಗಿ ಅಧಿಕಾರ ಸಿಗಬೇಕು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗೋ ಕಾಲ ಇನ್ನೂ ಕೂಡಿ ಬಂದಿಲ್ಲ. ಕಾಲ ಕೂಡಿ ಬಂದಾಗ ನೋಡಣ. ಸದ್ಯ ಆಗಿರೋ ಅನ್ಯಾಯದ ವಿರುದ್ಧ ಹೋರಾಟ ಮಾಡಿ ನ್ಯಾಯ ಒದಗಿಸಲು ಬದ್ಧರಾಗಿದ್ದೇವೆ. ನಾಯಕತ್ವದ ಕೊರತೆಯಿಂದಲೇ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಖರ್ಗೆ ರೀತಿಯಲ್ಲಿ ಅನೇಕರು ಬೆಳೆದರೆ ಅನ್ಯಾಯ ಸರಿಪಡಿಸಲು ಸಾಧ್ಯವಾಗುತ್ತದೆ ‘ ಎಂದು ಬೆಳಗಾವಿಯಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆ

Leave a Reply

Your email address will not be published.