ಕಪ್ಪಗಿದ್ದೀಯ ಎಂದು ಹೀಯಾಳಿಸಿದ್ದಕ್ಕೆ ಊಟದಲ್ಲಿ ವಿಷ ಬೆರೆಸಿದ ಮಹಿಳೆ : ಐವರ ಸಾವು

ಮುಂಬೈ : ಕಪ್ಪಗಿದ್ದೀಯ ಎಂದು ಹೀಯಾಳಿಸಿದ್ದಕ್ಕೆ ಮಹಿಳೆಯೊಬ್ಬಳು ಐವರನ್ನು ಕೊಂದ ಘಟನೆ ಮಹರಾಷ್ಟ್ರದ ಮಹಾಡ್‌ ಗ್ರಾಮದಲ್ಲಿ ನಡೆದಿದೆ.

ಆರೋಪಿಯನ್ನು ಜ್ಯೋತಿ ಸುರೇಶ್‌ ಸುರ್ವಾಸೆ ಎಂದು ಹೆಸರಿಸಲಾಗಿದೆ. ಈಕೆ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಆಕೆ ಕಪ್ಪಗಿದ್ದಾಳೆ, ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ಎಂದು ಗಂಡನ ಮನೆಯವರು ಹೀಯಾಳಿಸುತ್ತಿದ್ದರು. ಆದ್ದರಿಂದ ಸಿಟ್ಟಿಗೆದ್ದ ಜ್ಯೋತಿ ಸಂಬಂಧಿಕರು ಹಮ್ಮಿಕೊಂಡಿದ್ದ ಪಾರ್ಟಿಯ ಊಟದಲ್ಲಿ ಕ್ರಿಮಿನಾಶಕ ಬೆರೆಸಿದ್ದಾರೆ.

ಪಾರ್ಟಿಗೆ ಬಂದವರು ವಿಷಪೂರಿತ ಆಹಾರ ಸೇವಿಸಿದ ಪರಿಣಾಮ ಐವರು ಮೃತಪಟ್ಟಿದ್ದು, 120 ಮಂದಿ ಅಸ್ವಸ್ಥಗೊಂಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಕೃತ್ಯದ ಬಗ್ಗೆ ಜ್ಯೋತಿ ತಪ್ಪೊಪ್ಪಿಕೊಂಡಿದ್ದಾಳೆ.

 

 

Leave a Reply

Your email address will not be published.

Social Media Auto Publish Powered By : XYZScripts.com