ಯಾತ್ರಿಕರ ಮೇಲೆ ಕಾಡಾನೆ ದಾಳಿ : ಆರು ಮಂದಿಗೆ ಗಾಯ : ಜಖಂ ಆಯ್ತು ಕಾರು

ಮಂಗಳೂರು : ಧರ್ಮಸ್ಥಳದಿಂದ ಕುಕ್ಕೆ ಸುಬ್ರಮಣ್ಯಕ್ಕೆ ತೆರಳುತ್ತಿದ್ದ ಯಾತ್ರಿಕರ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ಕಡೂರು ಮೂಲದ ಯಾತ್ರಿಕರು ಧರ್ಮಸ್ಥಳದಿಂದ ಕುಕ್ಕೆ ಸುಬ್ರಮಣ್ಯಕ್ಕೆ ಓಮಿನಿ ಕಾರಿನಲ್ಲಿ ತೆರಳುತ್ತಿದ್ದರು. ಕಾರು ಬಿಳಿನೆಲೆ ಸಮೀಪ ತೆರಳುತ್ತಿದ್ದಾಗ ಕಾಡಾನೆ ರಸ್ತೆ ದಾಟುತ್ತಿತ್ತು. ಆನೆಯನ್ನು ಕಂಡ ಚಾಲಕ ಆನೆೋಯ ಹತ್ತಿರವೇ ಕಾರು ನಿಲ್ಲಿಸಿದ್ದರು. ಈ ವೇಳೆ ಸಿಟ್ಟಿಗೆದ್ದ ಕಾಡಾನೆ ಹಿಂತಿರುಗಿ ಬಂದು ಸೊಂಡಿಲಿನಿಂದ ಕಾರಿನ  ಮೇಲೆ ದಾಳಿ ಮಾಡಿದೆ.
ಈ ಹಿನ್ನಲೆಯಲ್ಲಿ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಕಾರು ಸಂಪೂರ್ ಜಖಂ ಆಗಿದೆ. ಕಾರಿನಲ್ಲಿ ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದರು. ಯಾತ್ರಿಕರೆಲ್ಲರೂ ಚಿಕ್ಕಮಗಳೂರು ಜಿಲ್ಲೆಯವರು ಎಂದು ತಿಳಿದುಬಂದಿದೆ.

Leave a Reply

Your email address will not be published.