ಸಂಗೀತವನ್ನೇ ಅಣಕಿಸುತ್ತಿರುವ ಕನ್ನಡದ ಡಿಂಗ್ ಚಕ್ ಪೂಜಾ : ವಿಕೃತ ಹಾಡಿಗೆ ಮರುಳಾದ ನವ ಮಾಧ್ಯಮ


ಇತ್ತೀಚಿನ ದಿನಗಳಲ್ಲಿ ಜನ ಸೋಶಿಯಲ್ ಮೀಡಿಯಾಗಳು ಇಲ್ಲದೆ ಬದುಕೇ ಇಲ್ಲ, ಎಲ್ಲವೂ ಅದರಿಂದಲೇ ನಡೆಯಬೇಕು ಎಂಬಂತ ಮನಸ್ಥಿತಿಗೆ ಜನ ತಲುಪಿದ್ದಾರೆ. ಅಲ್ಲದೆ ಅದೇ ಸೋಶಿಯಲ್ ಮೀಡಿಯಾದಿಂದಾಗಿ ಅನೇಕರು ರಾತ್ರಿ ಬೆಳಗಾಗುವುದರಲ್ಲೇ ಸ್ಟಾರ್‌ಗಳಾಗಿದ್ದೂ ಇದೆ.

ಅದೇ ರೀತಿ ಸೋಶಿಯಲ್‌ ಮೀಡಿಯಾದಲ್ಲಿ ಈಗ ಮತ್ತೊಬ್ಬ ವ್ಯಕ್ತಿ ಸ್ಟಾರ್ ಆಗಿ ಮೆರೆಯುತ್ತಿದ್ದಾನೆ. ಈತನ ಹೆಸರೇ ತುಳಸೀ ಪ್ರಸಾದ್‌. ಈತನನ್ನು ಕನ್ನಡದ ಡಿಂಗ್‌ಚಕ್‌ ಪೂಜಾ ಎಂದರೆ ತಪ್ಪಾಗಲಾರದು. ತುಳಸೀ ಪ್ರಸಾದ್‌ ಕೆಲ ದಿನಗಳಿಂದ ಫೇಸ್‌ಬುಕ್‌ನಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದಾನೆ. ಫೇಸ್‌ಬುಕ್ನಲ್ಲಿ ಹಾಡಿ, ಡಬ್‌ಸ್ಮ್ಯಾಶ್ ಮಾಡಿಕೊಂಡು ಜನರನ್ನು ರಂಜಿಸುತ್ತಿದ್ದು, ಸದ್ಯ ಎಲ್ಲರ ಬಾಯಲ್ಲೂ ಈತನ ಹಾಡಿನ ಬಗೆಗಿನ ಮಾತೇ ಕೇಳಿಬರುತ್ತಿದೆ.

ಈತನಿಗೆ ಸಂಗೀತ ಗೊತ್ತಿಲ್ಲದಿದ್ದರೂ, ವಿಚಿತ್ರವಾಗಿ ಹಾಡಿ ಒಂದಷ್ಟು ಫ್ಯಾನ್‌ ಫಾಲೋವರ್ಸ್‌ಗಳನ್ನು ಹೊಂದಿದ್ದು, ಕರ್ನಾಟಕದಲ್ಲಿ ಈತನ ಅಭಿಮಾನಿಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದ್ದಾನೆ. ಈತನ ಹಾಡನ್ನು ಕೇಳಿದ ಮಂದಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಅಲ್ಲದೆ ಈತನ ಪರ ಹಾಗೂ ವಿರೋಧದ ಮಾತುಗಳನ್ನಾಡುತ್ತಿದ್ದಾರೆ.

ಇನ್ನು ಸಂಗೀತ ಪ್ರಿಯರು, ಸಂಗೀತ ದಿಗ್ಗಜರು ಈತನ ಹಾಡನ್ನು ಕೇಳಿ ತಲೆ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಅಲ್ಲದೆ ಮಾಧ್ಯಮಗಳೂ ಈತನಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಸಂಗೀತದ ಗಂಧ ಗಾಳಿ ಗೊತ್ತಿಲ್ಲದೆ ಈ ರೀತಿ ಹಾಡುವ ವ್ಯಕ್ತಿಗೆ ಬೆಲೆ ನೀಡುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ತುಳಸೀ ಪ್ರಸಾದ್‌, ಸಂಗೀತಕ್ಕಿರುವ ಸ್ಥಾನವನ್ನು ಉಳಿಸಲಿ. ಸಂಗೀತ ಕಲಿತು ಉತ್ತಮವಾಗಿ ಹಾಡುವಂತಾಗಲಿ. ಮನರಂಜಿಸುವ ಭರಾಟೆಯಲ್ಲಿ ಸಂಗೀತಕ್ಕಿರುವ ಗೌರವ ಕಳೆಯದಿರಲಿ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಲಕ್ಷಾಂತರ ಮಂದಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

I just tried this song,sada ninna kannaly

RaviPrasad S.H यांनी वर पोस्ट केले शुक्रवार, 22 जून, 2018

#ಗೋಲ್ಡನ್_ಸ್ಟಾರ್_ಗಣೇಶ್ ನೀವು ಬರಬೇಡಿ ಈ ಕಡೆ…. ನಕ್ಕನ್ ವಾಯ್ಸ್ ಕೇಳ್ರೋ… ಶೇರ್ ಮಾಡಿ..

Thulasi Prasad Sh Fans यांनी वर पोस्ट केले गुरुवार, 10 मे, 2018

Chandan Shetty ನಿಮಗೆ ಓಪನ್ ಚಾಲೆಂಜ್…ನಮ್ ಅಣ್ಣನ ಮುಂದೆ ನೀನು ಏನೂ ಇಲ್ಲ….ಇಷ್ಟ ಆದರೆ ಶೇರ್ ಮಾಡಿ..

Thulasi Prasad Sh Fans यांनी वर पोस्ट केले मंगळवार, 8 मे, 2018

 

Leave a Reply

Your email address will not be published.