ಶುರುವಾಯ್ತು “ವಿಲನ್‌”ಗಳ ಹವಾ : ಟೀಸರ್‌ ನೋಡಲೂ ದರ ನಿಗದಿಪಡಿಸಿದ ಚಿತ್ರತಂಡ !

ಬೆಂಗಳೂರು : ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ  ಮಲ್ಟಿ ಸ್ಟಾರರ್ ನಟನೆಯ ಸಿನಿಮಾ ` ದಿ ವಿಲನ್ ‘ ಚಿತ್ರದ ಟೀಸರ್ ಇದೇ 28ರಂದು ಬಿಡುಗಡೆಯಾಗಲಿದೆ. ಸಿಎಂ ಕುಮಾರಸ್ವಾಮಿ ಈ ಟೀಸರ್ ಬಿಡುಗಡೆ ಮಾಡಲಿದ್ದಾರೆ.

ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದ ಟೀಸರ್ ಬಿಡುಗಡೆಗೂ ಟಿಕೆಟ್ ದರ ನಿಗಧಿ ಪಡಿಸಿದ್ದು, ದಿ ವಿಲನ್ ಸಿನಿಮಾ ಟೀಸರ್ ನೋಡಲು ಚಿತ್ರ ಪ್ರೇಮಿಗಳು 500 ರೂ. ಪಾವತಿಸಿ ವೀಕ್ಷಿಸಬಹುದು ಎಂದು ಚಿತ್ರತಂಡ ತಿಳಿಸಿದೆ.


ಜೂನ್ 28ಕ್ಕೆ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ ಜೋಗಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದ ಟೀಸರ್, ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಸಂಜೆ 7 ಗಂಟೆಗೆ ರಿಲೀಸ್ ಆಗಲಿದೆ. ಜಿಟಿ ಮಾಲ್ ನ ಎಲ್ಲಾ ಐದು ಸ್ಕ್ರೀನ್ ನಲ್ಲಿಯೂ ‘ದಿ ವಿಲನ್’ ಟೀಸರ್ ಬಿಡುಗಡೆಗೊಳ್ಳಲಿದೆ.  ಶಿವಣ್ಣ ಹಾಗೂ ಸುದೀಪ್ ಇಬ್ಬರಿಗೂ ಪ್ರತ್ಯೇಕ ಟೀಸರ್ ಸಿದ್ಧಪಡಿಸಲಾಗಿದೆ.

ದಿ ವಿಲನ್’ ಟೀಸರ್ ನೋಡಲು 500 ರೂಪಾಯಿ ಟಿಕೆಟ್ ನಿಗಧಿ ಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಪ್ರೇಮ್, ಒಂದು ಸಿನಿಮಾದ ನಿಜವಾದ ಹೀರೊ ಆ ಚಿತ್ರದ ನಿರ್ದೇಶಕ. ಆದರೆ ವಿಪರ್ಯಾಸ ಎಂದರೆ ಇವತ್ತು ಕನ್ನಡದ ಅನೇಕ ನಿರ್ದೇಶಕರು ಕಡು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸ್ವಲ್ಪಮಟ್ಟಿಗೆ ಆರ್ಥಿಕ ನೆರವು ನೀಡುವುದು ವಿಲನ್ ತಂಡದ ಉದ್ದೇಶ. ಆದ್ದರಿಂದಲೇ ಟೀಸರ್ ವೀಕ್ಷಣೆಗೆ ದರ ನಿಗಧಿಪಡಿಸಲಾಗಿದೆ. ಸಂಗ್ರಹವಾಗುವ ಟೀಸರ್ ಟಿಕೆಟ್ ಹಣವನ್ನು ಚಿತ್ರರಂಗದಲ್ಲಿ ಸಂಕಷ್ಟದಲ್ಲಿರುವ ನಿರ್ದೇಶಕರಿಗೆ ಸಮಾರಂಭದ ವೇದಿಕೆಯಲ್ಲೇ ಸಿಎಂ ಕುಮಾರಸ್ವಾಮಿ ಅವರಿಂದ ಕೊಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com