ಕುರಿ ಮೇಯಿಸಿದ ಬಿಜೆಪಿ ಶಾಸಕ : ಅಷ್ಟಕ್ಕೂ ಹೀಗೆ ಮಾಡಿದ್ದಾದರೂ ಏಕೆ…?

ಬೆಳಗಾವಿ : ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಏನು ಬೇಕಾದರೂ ಮಾಡುತ್ತಾರೆ ಎಂಬುದು ಜನಜನಿತವಾದ ಮಾತು. ಅದಕ್ಕೆ ಪುಷ್ಠಿ ಎಂಬಂತೆ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಕುರಿ ಕಾಯುವ ಕೆಲಸ ಮಾಡಿದ್ದಾರೆ.

ಮಹರಾಷ್ಟ್ರದಿಂದ ರಾಜ್ಯಕ್ಕೆ ಸಂತ ಬಾಳು ಅಜ್ಜ ಅವರ ಕುರಿಗಳು ಬಂದಿದ್ದು, ಈ ಕುರಿಗಳನ್ನು ಕಾಯುವುದರಿಂದ ರಾಜಕೀಯದಲ್ಲಿ ಒಳ್ಳೆಯದಾಗುತ್ತದೆ ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ಲಾಭ ಪಡೆಯಲು ಶಾಸಕರು ಹೆಗಲ ಮೇಲೆ ಕಂಬಳಿ ಹಾಕಿಕೊಂಡು, ಕೈಯಲ್ಲಿ ಕೋಲು ಹಿಡಿದುಕೊಂಡು ಕುರಿ ಕಾದಿದ್ದಾರೆ.

ದುರ್ಯೋಧನ ಐಹೊಳೆಯವರು ಸಂತ ಬಾಳು ಅಜ್ಜನ ಕುರಿಗಳಿಗೆ ವಿಶೇಷ ಪೂಜೆ ಮಾಡಿದ್ದು, ರಾಜಕಾರಣಿಗಳು ಈ ರೀತಿ ಜಿಲ್ಲೆಗೆ ಬಂದ ಕುರಿಗಳನ್ನು ಕಾಯುವುದು ವಾಡಿಕೆಯಂತೆ.

Leave a Reply

Your email address will not be published.