ರೈತರ ಮೊಗದಲ್ಲಿ ನಗು ಮೂಡಿಸಲು ಕುಮಾರಸ್ವಾಮಿ ಪ್ರಯತ್ನ : ಯಶಸ್ವಿಯಾಗ್ತಾರಾ ಸಿಎಂ ?

ಬೆಂಗಳೂರು : ರಾಜ್ಯದ ರೈತರಿಗೆ ಸಿಹಿಸುದ್ದಿ ನೀಡಲು ಸಿಎಂ ಕುಮಾರಸ್ವಾಮಿ ಸಿದ್ದತೆ ನಡೆಸಿದ್ದು, ಜೂನ್‌ 5ರಂದು ಸಾಲಮನ್ನಾ ಮಾಡಲು  ಯೋ ಜನೆ ರೂಪಿಸಿದ್ದಾರೆ . ಈ ಕುರಿತು ಹಣಕಾಸು ತಜ್ಞರ ಜೊತೆ,. ಬ್ಯಾಂಕ್‌ ಮುಖ್ಯಸ್ಥರ ಜೊತೆ ಚರ್ಚಿಸುತ್ತಿರುವುದಾಗಿ ತಿಳಿದುಬಂದಿದೆ.

ಜುಲೈ 5ರಂದು ಕುಮಾರಸ್ವಾಮಿ ಸ ಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡಿಸಲಿದ್ದು, ಇದರಲ್ಲಿ 53 ಸಾವಿರ ಕೋಟಿ ರೂ ರೈತರ ಸಾಲಮನ್ನಾ ಮಾಡಲು ಸಿದ್ಧತೆ ನಡೆಸಿದ್ದಾರೆ. ಇದರಿಂದ ಚುನಾವಣಾ ಪ್ರಣಾಳಿಕೆಯಲ್ಲಿ ಜೆಡಿಎಸ್‌ ನೀಡಿದ್ದ ಭರವಸೆಯನ್ನು ಈಡೇರಿಸಲು ಯೋಜನೆ ರೂಪಿಸುತ್ತಿದ್ದಾರೆ. ಈ ಮೂಲಕ ಬಿಜೆಪಿಯವರಿಗೆ ತಿರುಗೇಟು ನೀಡುವುದಾಗಿ ಹೇಳಿದ್ದಾರೆ.

ಸಹಕಾರ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ 2009 ಏಪ್ರಿಲ್ ನಿಂದ 2017 ಡಿಸೆಂಬರ್ ವರೆಗೂ ರೈತರು ಪಡೆದಿದ್ದ ಸಾಲವನ್ನು ಮನ್ನಾ ಮಾಡಲಿದ್ದಾರೆ ಎನ್ನಲಾಗಿದೆ. ರಾಜ್ಯದ ರೈತರಿಗೆ ಕೊಟ್ಟಿದ್ದ ಭರವಸೆ ಕಾರ್ಯರೂಪಕ್ಕೆ ತರಲು ಸಿಎಂ ಸಿದ್ಧರಾಗಿದ್ದಾರೆ. ರಾಜ್ಯ ಸರ್ಕಾರದ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, ಅಚ್ಚರಿಪಡುವ ರೀತಿಯಲ್ಲಿ ಸಾಲ ಮನ್ನಾ ಸ್ವರೂಪ ಘೋಷಿಸಲು ತಯಾರಿ ನಡೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com