ಯೂ ಟರ್ನ್‌ ಹೊಡೆದ ಸಚಿವ ಡಿಕೆಶಿ : ನಿಜವಾಗಿಯೂ ಶಿವಕುಮಾರ್ ಬಳಿ ಇದೆಯಾ ಬಿಜೆಪಿಗರ ಡೈರಿ ?

ಬೆಂಗಳೂರು : ನನ್ನ ಬಳಿ ಬಿಜೆಪಿ ನಾಯಕರ ಡೈರಿ ಇದೆ ಎಂದಿದ್ದ ಸಚಿವ ಡಿ.ಕೆ ಶಿವಕುಮಾರ್ ಈಗ ಉಲ್ಟಾ ಹೊಡೆದಿದ್ದಾರೆ.

ಡಿಕೆಶಿ ಮೇಲೆ ಐಟಿ ದಾಳಿ  ಮಾಡಿದ್ದ ಹಿನ್ನೆಲೆಯಲ್ಲಿ ನನ್ನನ್ನು ಹೆದರಿಸಲು ಸಾಧ್ಯವಿಲ್ಲ.  ನನ್ನ ಬಳಿಯೂ ಬಿಜೆಪಿ ನಾಯಕರ ಡೈರಿ ಇದೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ನಾಯಕರು ಡೈರಿ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದರು.

ಆದರೆ ಈ ಬಗ್ಗೆ ಸಚಿವ ಡಿಕೆಶಿ ಮಾತನಾಡಿದ್ದು, ನನ್ನ ಬಳಿ  ಡೈರಿ ಇದೆಯೋ ಇಲ್ಲವೋ ಎಂಬುದು ನನಗೆ ಗೊತ್ತು. ಇದೆ ಅಥವಾ ಇಲ್ಲ ಎಂಬ ವಿಚಾರ ಈಗ ಬೇಡ. ಎಲ್ಲದಕ್ಕೂ ಸಮಯ ಬರುತ್ತದೆ. ಕಾಲವೇ ಇದಕ್ಕೆ ಉತ್ತರ ನೀಡುತ್ತದೆ ಎಂದು ಹೇಳಿದ್ದಾರೆ.

ಅಲ್ಲದೆ, ತಮ್ಮ ಬಳಿ ಇದೆ ಎಂದಿದ್ದ ಡೈರಿ ವಿಚಾರದ ಬದಲು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಚುನಾವಣೆ ವೇಳೆ ಬಿಡುಗಡೆ ಮಾಡಿದ್ದ ಡೈರಿಯ ಬಗ್ಗೆ ತನಿಖೆ ನಡೆಸಲಿ ಎಂದು ಮತ್ತೊಂದು ಸವಾಲು ಹಾಕಿದರು. ದಿನೇಶ್ ಗುಂಡೂರಾವ್ ಡೈರಿ ಬಹಿರಂಗಗೊಳಿಸಿದ್ದರು. ಅದರಲ್ಲಿ ಲೆಹರ್ ಸಿಂಗ್ ಸೇರಿದಂತೆ ಹಲವರ ಮಾಹಿತಿ ಇತ್ತು. ಬಿಜೆಪಿಯವರು ಆ ಡೈರಿ ವಿಚಾರವೇಕೆ ಪ್ರಸ್ತಾಪ ಮಾಡುತ್ತಿಲ್ಲ? ಆ ಡೈರಿ ಬಗ್ಗೆ ಏಕೆ ತನಿಖೆ ನಡೆಯುತ್ತಿಲ್ಲ? ಬಿಜೆಪಿ ಮುಖಂಡರಿಗೆ ಅದರಲ್ಲಿ ಯಾರ ಹೆಸರು ಪ್ರಸ್ತಾಪವಾಗಿತ್ತು ಎಂಬುದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published.