ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸ್ತಾರಾ ದೊಡ್ಡಗೌಡರು… : JDS ನಾಯಕರು ಹೇಳ್ತಿರೋದೇನು ?

ಬೆಂಗಳೂರು : ಕರ್ನಾಟಕದ ಚುನಾವಣೆ ಮುಗಿದು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಸಿಎಂ ಆಗಿ ಅಧಿಕಾರ ನಡೆಸುತ್ತಿದ್ದಾರೆ.

ರಾಜ್ಯದಲ್ಲಿನ ಎಲ್ಲಾ ಸಮಸ್ಯೆಗಳು ಒಂದೊಂದಾಗಿಯೇ  ಪರಿಹಾರವಾಗುತ್ತಿದ್ದು, ಈಗ ದೇವೇಗೌಡರು ಲೋಕಸಭಾ ಚುನಾವಣೆಯತ್ತ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಜೆಡಿಎಸ್ ಮುಖಂಡ, ನೀರಾವರಿ ಸಚಿವ ಪುಟ್ಟರಾಜು ಮಾತನಾಡಿದ್ದು, ದೇವೇಗೌಡರು ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಬೇಕು ಎಂಬುದೇ ನಮ್ಮ ಆಸೆ. ಅನೇಕರು ಈ ಬಗ್ಗೆ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ದೇವೇಗೌಡರು ಸ್ಪರ್ಧಿಸಿದರೆ  ನಾವೇ ಪುಣ್ಯವಂತರು ಎಂದಿದ್ದಾರೆ.

ಇದೇ ವೇಳೆ ರೆಬೆಲ್‌ ಸ್ಟಾರ್ ಅಂಬರೀಶ್ ಕುರಿತು ಮಾತನಾಡಿದ ಅವರು, ಅಂಬರೀಷ್ ಅವರು ರಾಜಕಾರಣಿ ಎನ್ನುವು ದಕ್ಕಿಂತ ಅವರು ಒಬ್ಬ ಉತ್ತಮ ಕಲಾವಿದರು. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಅವರು ಜೆಡಿಎಸ್ ಸೇರುವುದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ.

ಈ ಹಿನ್ನೆಲೆಲಯಲ್ಲಿ ಬೆಂಬಲಿಗರ ಒತ್ತಾಯದ ಮೇಲೆ ದೇವೇಗೌಡರು ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published.

Social Media Auto Publish Powered By : XYZScripts.com