ಅಮೆರಿಕ ವಿದ್ಯಾರ್ಥಿಗಳೊಂದಿಗೆ ಬಟ್ಲರ್ ಇಂಗ್ಲೀಷ್‌ನಲ್ಲಿ ಮಾತಾಡಿ ನಗೆಪಾಟಲಿಗೀಡಾದ ಉನ್ನತ ಶಿಕ್ಷಣ ಸಚಿವ !

ಬೆಂಗಳೂರು : ಖಾತೆ ಬದಲಾವಣೆಗೆ ಎಲ್ಲಾ ಕಸರತ್ತು ಮಾಡಿ ಕೊನೆಗೆ ಒಲ್ಲದ ಮನಸ್ಸಿನಲ್ಲಿ ಉನ್ನತ ಶಿಕ್ಷಣ ಖಾತೆ ವಹಿಸಿಕೊಂಡಿರುವ ಸಚಿವ ಜಿ.ಟಿ.ದೇವೇಗೌಡ ಅವರು ಅಮೆರಿಕ ವಿದ್ಯಾರ್ಥಿಗಳೊಂದಿಗೆ ಮಾತನಾಡಲು ಪರದಾಡಿದ ಸಂಗತಿ ನಡೆದಿದೆ.

ಇಂದು ವಿಧಾನಸೌಧದಲ್ಲಿ ಸಚಿವ ಜಿ.ಟಿ ದೇವೇಗೌಡ ಅಮೆರಿಕದ ವಿದ್ಯಾರ್ಥಿನಿಯರೊಂದಿಗೆ ಅರ್ಧಂಬರ್ದ ಇಂಗ್ಲೀಷ್‌ನಲ್ಲಿ ಮಾತನಾಡಿದ್ದು, ಆಡಿಕೊಳ್ಳುವವರ ಎದುರು ಜಾರಿ ಬಿದ್ದಂತಾಗಿದೆ.

ಇಂದು ಅಮೆರಿಕದಿಂದ ಕರ್ನಾಟಕ ಪ್ರವಾಸಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ತಂಡ ವಿಧಾನಸೌಧಕ್ಕೆ ಭೇಟಿ ನೀಡಿ ಸಚಿವರೊಂದಿಗೆ ಮಾತುಕತೆ ನಡೆಸಿದರು. 8ನೇ ತರಗತಿ ಓದಿರುವ ದೇವೇಗೌಡರು ಇಂಗ್ಲೀಷ್‌ನಲ್ಲಿ ಮಾತನಾಡಲು ಪರದಾಡಿದ್ದು, ಈ  ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಬೆಂಗಳೂರು ಮತ್ತು ರಾಜ್ಯದ ವಿವಿಗಳಿಗೆ ತೆರಳಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಡುವುದಾಗಿ ಇದೇ ವೇಳೆ ಸಚಿವರು ವಿದ್ಯಾರ್ಥಿಗಳ ನಿಯೋಗಕ್ಕೆ ಭರವಸೆ ನೀಡಿದರು.

 

Leave a Reply

Your email address will not be published.

Social Media Auto Publish Powered By : XYZScripts.com