ಮುಗಿದಿಲ್ಲ ಮುನಿಸು : ಬೆಂಬಲಿಗರ ಸಭೆ ಹೆಸರಲ್ಲಿ ಮತ್ತೆ ರಾಯಣ್ಣ ಬ್ರಿಗೇಡ್‌ಗೆ ಮರುಜೀವ ನೀಡಿದ ಈಶ್ವರಪ್ಪ ?

ಬಾಗಲಕೋಟೆ : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿ ಬೆಂಬಲಿಗರ ಸಭೆ ಕರೆದಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿ ಮತ್ತೊಂದು ರಾಜಕಾರಣ ನಡೆಯುವ ಸೂಚನೆ ಕಂಡು ಬರುತ್ತಿದೆ.

ಇನ್ನು ಬೆಂಬಲಿಗರ ಸಭೆ ನಡೆಸುತ್ತಿರುವ ಈಶ್ವರಪ್ಪ ರಾಯಣ್ಣ ಬ್ರಿಗೇಡ್‌ಗೆ ಮತ್ತೆ ಮರುಜೀವ ನೀಡುತ್ತಿದ್ದಾರಾ ಎಂಬ ಪ್ರಶ್ನೆ ಉದ್ಭವವಾಗಿದೆ.

ಈ ಹಿಂದೆ ಈಶ್ವರಪ್ಪ ಬಿಜೆಪಿಯಲ್ಲಿದ್ದುಕೊಂಡೇ ರಾಯಣ್ಣ ಬ್ರಿಗೇಡ್‌ ಕಟ್ಟಿದ್ದರು. ಆದರೆ ಚುನಾವಣೆ ವೇಳೆ ಹೈಕಮಾಂಡ್‌ ಆದೇಶದಿಂದಾಗಿ ರಾಯಣ್ಣ ಬ್ರಿಗೇಡ್‌ ಕೆಲಸ ನಿಲ್ಲಿಸಿದ್ದು, ಈಗ ಮತ್ತೆ ಈಶ್ವರಪ್ಪ ಸಭೆ  ಕರೆದಿರುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಜೂನ್‌ 25ರಂದು ಬಾಗಲಕೋಟೆಯಲ್ಲಿ ಸಭೆ ನಡೆಸಲಿದ್ದು, ಸಭೆಗೆ ಆಹ್ವಾನಿತರೆಲ್ಲರೂ ರಾಯಣ್ಣ ಬ್ರಿಗೇಡ್‌ನಲ್ಲಿದ್ದವರೇ ಎಂದು ತಿಳಿದುಬಂದಿದೆ. ಚುನಾವಣೆಯಲ್ಲಿ ಅಮಿತ್ ಶಾ ಆಜ್ಞೆಯಂತೆ ರಾಯಣ್ಣ ಬ್ರಿಗೇಡ್‌ ಬಿಟ್ಟಿದ್ದ ಈಶ್ವರಪ್ಪ ಪಕ್ಷಕ್ಕಾಗಿ ದುಡಿದಿದ್ದರು. ಆದರೆ  ಚುನಾವಣೆ ಬಳಿಕ ಯಡಿಯೂರಪ್ಪ, ಈಶ್ವರಪ್ಪ ಅವರನ್ನು ಕಡೆಗಣಿಸಿದ್ದು ಮತ್ತೆ ರಾಯಣ್ಣ ಬ್ರಿಗೇಡ್‌ ಚಾಲನೆ ದೊರಯಲಿದೆ ಎಂದು ಹೇಳಲಾಗುತ್ತಿದೆ.

ಆದರೆ ಈ ಸಭೆ ಬಗ್ಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಾಜ್ಯಾಧ್ಯಕ್ಷ ವಿರೂಪಾಕ್ಷಪ್ಪ ಅಪಸ್ವರ ಎತ್ತಿದ್ದಾರೆ.  ಚುನಾವಣೆ ವೇಳೆ ಕಾಂಗ್ರೆಸ್ ಸೇರಿದ್ದ ರಾಯಣ್ಣ ಬ್ರಿಗೇಡ್ ರಾಜ್ಯಾಧ್ಯಕ್ಷ ವಿರೂಪಾಕ್ಷಪ್ಪ ರಾಯಣ್ಣ ಬ್ರಿಗೇಡ್​ಗೂ ಈಶ್ವರಪ್ಪಗೂ ಈಗ ಏನೂ ಸಂಬಂಧವಿಲ್ಲ. ಅವರು ಒಬ್ಬ ನಾಯಕ ಅಷ್ಟೇ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್​ನಲ್ಲಿ ಬಿರುಕು ಮೂಡಲು, ಬ್ರಿಗೇಡ್​ ಹಾಳಾಗಲು ಈಶ್ವರಪ್ಪರೇ ಕಾರಣ. ಅವರಿಗೆ ತಲೆ ಸರಿ ಇಲ್ಲ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com