ಕೇರಳ : ಅರ್ಜೆಂಟೀನಾ ಸೋಲಿನಿಂದ ಹತಾಶೆ ; ಸೂಸೈಡ್ ನೋಟ್ ಬರೆದಿಟ್ಟು ಕಾಣೆಯಾದ ಅಭಿಮಾನಿ..

ಫಿಫಾ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯವೊಂದರಲ್ಲಿ ಅರ್ಜೆಂಟೀನಾ ತಂಡದ ಸೋಲಿನಿಂದ ನಿರಾಶೆಗೊಂಡ ಫುಟ್ಬಾಲ್ ಅಭಿಮಾನಿಯೊಬ್ಬ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ಅರ್ಜೆಂಟೀನಾ ತಂಡದ ಹಾಗೂ ಸ್ಟಾರ್ ಸ್ಟ್ರೈಕರ್ ಲಿಯೋನೆಲ್ ಮೆಸ್ಸಿಯ ಅಭಿಮಾನಿಯಾಗಿದ್ದ 30 ವರ್ಷ ವಯಸ್ಸಿನ ಡಿನು ಅಲೆಕ್ಸ್ ಎಂಬಾತ ಗುರುವಾರ ಬೆಳಿಗ್ಗೆಯಿಂದ ಕಾಣೆಯಾಗಿದ್ದಾನೆ.

ಗುರುವಾರ ನಡೆದಿದ್ದ ‘ಡಿ’ ಗುಂಪಿನ ಲೀಗ್ ಪಂದ್ಯದಲ್ಲಿ ಕ್ರೊವೇಶಿಯಾ ವಿರುದ್ಧ ಅರ್ಜೆಂಟೀನಾ 3-0 ಗೋಲುಗಳ ಅಂತರದ ಹೀನಾಯ ಸೋಲನುಭವಿಸಿತ್ತು. ಈ ಪಂದ್ಯವನ್ನು ಮಧ್ಯರಾತ್ರಿ ಕುಳಿತು ವೀಕ್ಷಿಸಿ, ಸೋಲಿನ ಹಿನ್ನೆಲೆಯಲ್ಲಿ ವಿಪರೀತ ನಿರಾಶೆಗೊಳಗಾದ ಅಲೆಕ್ಸ್ ಡೆತ್, ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾನೆ.

ಸ್ಥಳದಲ್ಲಿ ದೊರೆತ ಪತ್ರದಲ್ಲಿ ‘ ನನಗೆ ಈ ಜಗತ್ತಿನಲ್ಲಿ ಇನ್ನೇನನ್ನೂ ನೋಡುವುದು ಉಳಿದಿಲ್ಲ, ನಾನು ತೀವ್ರ ಖಿನ್ನತೆಗೊಳಗಾಗಿದ್ದೇನೆ ‘ ಎಂದು ಬರೆಯಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com