ಕ್ಷುಲ್ಲಕ ಕಾರಣಕ್ಕೆ ಅಮ್ಮ, ಚಿಕ್ಕಮ್ಮನ ನಡುವೆ ಜಗಳ : ಬಿಡಿಸಲು ಹೋಗಿ ಮಗನ ಸಾವು

ಕಲಬುರಗಿ : ಮುಸರಿ ಚೆಲ್ಲಿದ  ಕ್ಷುಲ್ಲಕ ಕಾರಣಕ್ಕೆ ಆರಂಭಗೊಂಡ ಅಮ್ಮ, ಚಿಕ್ಕಮ್ಮನ ಜಗಳದಲ್ಲಿ ಮಗನ ಸಾವಿನಲ್ಲಿ ಅಂತ್ಯಗೊಂಡಿರುವ ದಾರುಣ ಘಟನೆ ಕಲಬುರಗಿಯ ಸೇಡಂ ತಾಲೂಕಿನ ಲಿಂಗಂಪಲ್ಲಿ ಗ್ರಾಮದಲ್ಲಿ ನಡೆದಿದೆ.

22 ವರ್ಷದ ಮಾಶಪ್ಪ ಬಂಡಜಂಗಮ ಮೃತಪಟ್ಟ ದುರ್ದೈವಿ. ಮಾಶಪ್ಪನ ತಾಯಿ ದಸ್ತಮ್ಮ ಬಂಡಜಂಗಮ ಹಾಗೂ ಚಿಕ್ಕಮ್ಮ ಮಂಗಮ್ಮ ಬಂಡಜಂಗಮ್ಮ ಇಬ್ಬರ ನಡುವೆ ಕಸಮುಸುರೆ ಚಲ್ಲಿದ ವಿಷಯಕ್ಕೆ ಸಂಬಂಧಿಸಿದಂತೆ ಗಲಾಟೆ ಆರಂಭಗೊಂಡಿತ್ತು.ಇದನ್ನು ಗಮನಿಸಿದ ಮಾಶಪ್ಪ ಮಧ್ಯೆ ಪ್ರವೇಶಿಸಿ ಜಗಳ ಬಿಡಿಸಲು ಯತ್ನಿಸಿದ್ದಾನೆ.

ಜಗಳ ಬಿಡಿಸಲು ಹೊದ ಮಾಶಪ್ಪನನ್ನು  ಮಹಿಳೆಯರು ತಳ್ಳಿಹಾಕಿದ್ದರು, ಸಿಸಿ ರಸ್ತೆಯಾದರಿಂದ ನೆಲಕ್ಕೆ ಬಿದ್ದ ಯುವಕ ಮಾಶಪ್ಪ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಸದ್ಯ ಇಬ್ಬರು ಮಹಿಳೆಯರ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಿಕೊಂಡ ಮುದೋಳ ಠಾಣೆ ಪೊಲೀಸರು ಚಿಕ್ಕಮ್ಮ ಮಂಗಮ್ಮನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com