ಇಂದಿರಾ, ಸೋನಿಯಾ ಗಾಂಧಿಯಷ್ಟೇನು ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿಲ್ಲ :ಸಂಸದ ಪ್ರಹ್ಲಾದ್ ಜೋಶಿ 

ಹುಬ್ಬಳ್ಳಿ : ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿಯವರಷ್ಟೇನು ದ್ವೇಷದ ರಾಜಕಾರಣ ಬಿಜೆಪಿ ಮಾಡುತ್ತಿಲ್ಲ ಎಂದು ಡಿಕೆ ಶಿವಕುಮಾರಗೆ  ಸಂಸದ ಪ್ರಹ್ಲಾದ್ ಜೋಶಿ ಟಾಂಗ್​ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಹ್ಲಾದ್​ ಜೋಶಿ, ಸಚಿವ ಡಿ ಕೆ ಶಿವಕುಮಾರ ಮನೆಯಲ್ಲಿ ಅಕ್ರಮ ಹಣ ಸಿಕ್ಕಿದ್ದಕೆ ಮತ್ತು ಹವಾಲಾ ಜಾಲ ಉಪಯೋಗಿಸಿರುವುದರ ಕುರಿತು ಸಾಕ್ಷ್ಯಾಧಾರಗಳು ಸಿಕ್ಕಿವೆ. ಹೀಗಿದ್ದರೂ ಡಿಕೆ ಶಿವಕುಮಾರ್ ಬಿಜೆಪಿ ಮೇಲೆ ಆರೋಪ ಮಾಡುವುದು ಸರಿಯಲ್ಲ ಬಿಜೆಪಿ ಏನು ಇಂದಿರಾಗಾಂಧಿ  ಹಾಗೂ ಸೋನಿಯಾ ಗಾಂಧಿಯಷ್ಟೇನು ದ್ವೇಷದ ರಾಜಕಾರಣ ಮಾಡುತ್ತಿಲ್ಲ ಸಂಸದ ಪ್ರಹ್ಲಾದ್ ಜೋಶಿ ಡಿಕೆ ಶಿವಕುಮಾರಗೆ ತಿರುಗೆಟು ನೀಡಿದ್ದಾರೆ.

ಅಷ್ಟಾಗಿಯೂ ಚುನಾವಣೆ ಮೊದಲು ಡಿಕೆಶಿ ಜತೆಗೆ ಹಾವು ಮುಂಗುಸಿಯಂತೆ ಕಾದಾಡಿದ ಕುಮಾರಸ್ವಾಮಿ, ಈಗ ಅವರನ್ನು ಬೆಂಬಲಿಸಿದ್ದಾರೆ. ಇದು ಬರೀ ಮೇಲ್ನೋಟದ ಬೆಂಬಲ. ನಿಜವಾಗಿಯೂ ಅವರನ್ನು ಯಾವಾಗ ಕೈಬಿಡಬೇಕು ಎನ್ನುವ ಅವಕಾಶಕ್ಕಾಗಿ ಕುಮಾರಸ್ವಾಮಿ ಕಾಯುತ್ತಿದ್ದಾರೆ ಎಂದು ಜೋಶಿ ಹೇಳಿಕೆ ನೀಡಿದ್ದಾರೆ.

 

 

Leave a Reply

Your email address will not be published.