ಹುಬ್ಬಳ್ಳಿ : ಫೇಸ್‌ಬುಕ್‌‌ನಲ್ಲಿ ಮೋದಿ ಪರ ಪೋಸ್ಟ್ ಮಾಡಿದ ಮತ್ತೋರ್ವ ಪೋಲೀಸ್ ಪೇದೆ..

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಪರವಾಗಿ ಹೆಡ್ ಕಾನಸ್ಟೇಬಲ್ ಫೇಸ್‌ಬುಕ್‌‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಹೊಗಳುವ ಭರದಲ್ಲಿ ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಅಣಕಿಸುವ ಪೋಸ್ಟ್ ಹಾಕಿದ್ದಾರೆ.

ರವಿಕುಮಾರ ಕುರಿ ಎಂಬ ಪೊಲೀಸ್ ಕಾನ್ಸ್ ಟೇಬಲ್ ಮೋದಿ ಪರ ಪ್ರಚಾರ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ದಕ್ಷಿಣ ಎಸಿಪಿ ಕಚೇರಿಯಲ್ಲಿ ರವಿಕುಮಾರ್ ಕುರಿ ಹೆಡ್ ಕಾನಸ್ಟೇಬಲ್ ಆಗಿದ್ದಾರೆ.

 

ಕಳೆದ ವಾರ ಶಹರ ಠಾಣೆ ಪೇದೆ ಅರುಣ ಡೊಳ್ಳಿನ್ ಎಂಬಾತ ಸಾಲಮನ್ನಾ ಕುರಿತ ಹೆಚ್ ಡಿಕೆ ರಾಜೀನಾಮೆ ಕೇಳಿದ್ದ. ಈ ಸಂಬಂಧ ಆಯುಕ್ತರು ಪೇದೆಯನ್ನ ಸಸ್ಪೆಂಡ್ ಮಾಡಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಇಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

Leave a Reply

Your email address will not be published.