ಕೇರಳ ಸಿಎಂಗೆ ಸಿಗುತ್ತಿಲ್ಲ ಮೋದಿ ದರ್ಶನ ಭಾಗ್ಯ : 4ನೇ ಬಾರಿ ಭೇಟಿ ತಿರಸ್ಕರಿಸಿದ PM ಕಚೇರಿ

ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯು ಪಿಣರಾಯಿ ವಿಜಯನ್ ಮತ್ತು ಅವರ ಪಕ್ಷದ ಪ್ರತಿನಿಧಿಗಳ ಭೇಟಿಗೆ ಅವಕಾಶ ನಿರಾಕರಿಸಿದೆ ಎಂದು ಪಿಣರಾಯಿ ಅವರ ಕಚೇರಿಯ ಮೂಲಗಳಿಂದ ತಿಳಿದುಬಂದಿದೆ.

ಪಿಣರಾಯಿ ಮತ್ತು ಅವರ ತಂಡ ಕೇರಳದಲ್ಲಿ ಪಡಿತರ ವಿತರಣೆ ವಿಷಯದ ಬಗ್ಗೆ ಭಿನ್ನಾಭಿಪ್ರಾಯಗಳಿರುವುದರಿಂದ ಈ ಬಗ್ಗೆ ಚರ್ಚಿಸುವುದಕ್ಕಾಗಿ ಪ್ರಧಾನಿಯವರ ಭೇಟಿಗೆ ಅವಕಾಶ ಕೋರಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಕಚೇರಿ, ಅಗತ್ಯವಿದ್ದರೆ ಪಿಣರಾಯಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಭೇಟಿ ಮಾಡಲಿ ಎಂದಿದೆ. ಇದೇ ವಿಷಯನ್ನು ಚರ್ಚಿಸಲು ಕಳೆದ ವಾರವೂ ಪಿಣರಾಯಿ ಪ್ರಧಾನಿ ಕಚೇರಿಯನ್ನು ಸಂಪರ್ಕಿಸಿದರೂ ಆಗಲೂ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ.

ಈ ಹಿಂದೆ ಮಾರ್ಚ್ 20, 2017 ರಂದು ಬಜೆಟ್ ಬಗ್ಗೆ ಚರ್ಚಿಸಲು, ನೋಟು ರದ್ಧತಿಯ ಬಗ್ಗೆ ಚರ್ಚಿಸಲು ನವೆಂಬರ್ 24, 2016ರಂದು ಅವಕಾಶ ಕೋರಿದಾಗ  ಅಂದು ಕೂಡ ಭೇಟಿಯನ್ನು ನಿರಾಕರಿಸಲಾಗಿತ್ತು.

 

Leave a Reply

Your email address will not be published.

Social Media Auto Publish Powered By : XYZScripts.com