ದಾವಣಗೆರೆ : ನಿಧಿ ಆಸೆಗಾಗಿ ವಾಮಾಚಾರ ಮಾಡಿದ ನಿಧಿಗಳ್ಳರು : ಸಾರ್ವಜನಿಕರಿಂದ ಥಳಿತ..!

ದಾವಣಗೆರೆ : ನಿಧಿ ಆಸೆಗಾಗಿ ನಿಧಿಗಳ್ಳರು ವಾಮಾಚಾರ ಮಾಡಿರುವ ಘಟನೆ ಜಗಳೂರು ತಾಲ್ಲೂಕಿನ ದೊಣ್ಣೆಹಳ್ಳಿಯಲ್ಲಿ ನಡೆದಿದೆ. ವಿಷಯ ತಿಳಿದ ಅಕ್ಕ ಪಕ್ಕದ ಮನೆಯವರಿಗೆ ವಾಮಾಚಾರ ಮಾಡಿದ ನಾಲ್ವರಿಗೆ ಥಳಿಸಿದ್ದಾರೆ.

ಮೌನಾಚಾರಿ, ಬಾಷಾ ಸೇರಿದಂತೆ ಮತ್ತೆ ಇಬ್ಬರು ನಿಧಿಗಾಗಿ ವಾಮಾಚಾರ ಮಾಡಿದ ವ್ಯಕ್ತಿಗಳಾಗಿದ್ದಾರೆ. ಮನೆಯ ಮುಂಭಾಗದಲ್ಲಿ ಬೆಳಗಿನ ಜಾವ ಗುಂಡಿ ತೆಗೆದು ನಿಧಿಗಳ್ಳರು ಪೂಜೆ ಮಾಡುತ್ತಿದ್ದರು. ಗುಂಡಿ ತೆಗೆದು ಕೋಳಿ, ಗರಕೆ, ಹಾಗೂ ಹಾರೆಗೆ ಪೂಜೆ ಮಾಡಿದ್ದರು.

ನಿಧಿಗಳ್ಳರನ್ನು ಥಳಿಸಿದ ಸಾರ್ವಜನಿಕರು ಬಾಷಾ, ಮೌನಾಚಾರಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತಿಬ್ಬರು ಪರಾರಿಯಾಗಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com