Cricket : ಜೇಸನ್ ರಾಯ್ ಶತಕ : ಆಸೀಸ್ ವಿರುದ್ಧ ಇಂಗ್ಲೆಂಡ್ ತಂಡಕ್ಕೆ 6 ವಿಕೆಟ್ ಜಯ

ಚೆಸ್ಟರ್ ಲೀ ಸ್ಟ್ರೀಟ್ ನ ರಿವರ್ಸೈಡ್ ಮೈದಾನದಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆತಿಥೇಯ ಇಂಗ್ಲೆಂಡ್ 6 ವಿಕೆಟ್ ಗಳಿಂದ ಜಯ ಸಾಧಿಸಿದೆ. ಈಗಾಗಲೇ 5 ಪಂದ್ಯಗಳ ಏಕದಿನ ಸರಣಿಯನ್ನು ತನ್ನ ಕೈವಶಪಡಿಸಿಕೊಂಡಿರುವ ಇಂಗ್ಲೆಂಡ್ 4-0 ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ 50 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 310 ರನ್ ಮೊತ್ತ ಕಲೆಹಾಕಿತು. ಆಸ್ಟ್ರೇಲಿಯಾ ಪರವಾಗಿ ಆರಂಭಿಕ ಬ್ಯಾಟ್ಸಮನ್ ಆ್ಯರನ್ ಫಿಂಚ್ (101) ಹಾಗೂ 3ನೇ ಕ್ರಮಾಂಕದಲ್ಲಿ ಆಡಲಿಳಿದ ಶಾನ್ ಮಾರ್ಷ್ (103) ಶತಕ ಬಾರಿಸಿದರು.

ಚೇಸ್ ಮಾಡಲಿಳಿದ ಇಂಗ್ಲೆಂಡ್ 44.4 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು 314 ರನ್ ಸೇರಿಸಿ ಜಯ ತನ್ನದಾಗಿಸಿಕೊಂಡಿತು. ಆರಂಭಿಕ ಬ್ಯಾಟ್ಸಮನ್ ಗಳಾದ ಜೇಸನ್ ರಾಯ್ (101) ಶತಕ ಹಾಗೂ ಜಾನಿ ಬೇರ್ಸ್ಟೊವ್ (79), ಜೋಸ್ ಬಟ್ಲರ್ (54) ಅರ್ಧಶತಕ ಬಾರಿಸಿದರು.

ಶತಕ ಸಿಡಿಸಿ ಗೆಲುವಿಗೆ ಕಾರಣರಾದ ಜೇಸನ್ ರಾಯ್ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com