Breastfeeding case : ಸ್ತನಪಾನ ಅಶ್ಲೀಲತೆ ಅಲ್ಲ : ಕೇರಳ ಹೈಕೋರ್ಟ್, ಗಿಲು ಜೋಸೆಫ್ ನಿರಾಳ..

ತಿರುವನಂತಪುರ : ಅಶ್ಲೀಲತೆ ನೋಡುಗರ ದೃಷ್ಟಿಯಲ್ಲಿದೆಯೇ ಹೊರತು, ಮಗುವಿಗೆ ಸ್ತನ್ಯಪಾನ ಮಾಡಿಸುವುದರಲ್ಲಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಗೃಹಲಕ್ಷ್ಮಿ ಮ್ಯಾಗಜಿನ್ ರೂಪದರ್ಶಿ ಗಿಲು ಜೋಸೆಫ್ ಅವರು ಮಹಿಳಾ ದಿನಾಚರಣೆಯ ಅಂಗವಾಗಿ ಮಗುವಿಗೆ ಸ್ತನ್ಯಪಾನ ಮಾಡಿಸುವ ಚಿತ್ರವನ್ನು ತನ್ನ ಮುಖಪುಟಕ್ಕೆ ಬಳಸಿಕೊಂಡಿತ್ತು.

ಆದರೆ ಗಿಲು ಜೋಸೆಫ್ ಅವಿವಾಹಿತೆಯಾಗಿದ್ದು ಸ್ತನ್ಯಪಾನ ಮಾಡಿಸುತ್ತಿರುವ ಪೋಸ್ ನೀಡಿದ್ದರಿಂದ ಸ್ತ್ರೀತನಕ್ಕೆ ಧಕ್ಕೆಯಾಗಿದೆ. ಚಿತ್ರ ಕಾಮ ಪ್ರಚೋದಕವಾಗಿದೆ ಎಂದು ವಕೀಲ ಮ್ಯಾಥ್ಯೂ ವಿಲ್ಸನ್ ಎಂಬುವವರು ಪತ್ರಿಕೆ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಚಿತ್ರದ ಕುರಿತಂತೆ ದೇಶಾದ್ಯಂತ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಇನ್ನು ಕೆಲ ಮಹಿಳಾ ಪರ ಸಂಘಟನೆಗಳು ಇದನ್ನು ಸಮರ್ಥನೆ ಮಾಡಿಕೊಂಡಿದ್ದವು. ಇಂದು ಹೈಕೋರ್ಟ್ ತೀರ್ಪು ಹೊರಬಿದ್ದಿದ್ದು ಸಾಮಾಜಿಕ ತಾಣಗಳಲ್ಲಿಯೂ ವ್ಯಾಪಕ ಚರ್ಚೆಯಾಗುತ್ತಿದೆ.

Leave a Reply

Your email address will not be published.