ಬಿಹಾರ : ಮಾವಿನ ಹಣ್ಣು ಕದ್ದ ಬಾಲಕನನ್ನು ಗುಂಡಿಟ್ಟು ಕೊಂದ ತೋಪಿನ ಮಾಲೀಕ..

ಮಾವಿನ ಹಣ್ಣನ್ನು ಕದ್ದ ತಪ್ಪಿಗೆ ಬಾಲಕನನ್ನು ತೋಟದ ಮಾಲೀಕ ಗುಂಡಿಟ್ಟು ಕೊಂದಿರುವ ಘಟನೆ ಬಿಹಾರದಲ್ಲಿ ಗುರುವಾರ ನಡೆದಿದೆ. ಬಿಹಾರದ ಖಗರಿಯಾ ಪ್ರಾಂತ್ಯದ ಗೊಗೊರಿ ಪೋಲೀಸ್ ಸ್ಟೇಶನ್  ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 10 ವರ್ಷದ ಬಾಲಕನನ್ನು ಕೊಂದ ತೋಟದ ಮಾಲೀಕ ಘಟನೆಯ ಬಳಿಕ ಪರಾರಿಯಾಗಿದ್ದಾನೆ. ಬಾಲಕನ ಮನೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Image result for shot dead mango

ಬಿಹಾರದ ಖಗರಿಯಾ ಸಮೀಪದ ಶೇರ್ ಗಢ ಹಳ್ಳಿಯಲ್ಲಿ ಬಾಲಕ ತನ್ನ ಗೆಳೆಯರೊಂದಿಗೆ ಆಟವಾಡುತ್ತಿದ್ದ. ಇದೇ ವೇಳೆ ಬಾಲಕ ಹಾಗೂ ಆತನ ಸ್ನೇಹಿತರೆಲ್ಲ ಸೇರಿಕೊಂಡು ಮಾವಿನ ಹಣ್ಣು ಕೀಳಲೆಂದು ಹತ್ತಿರದ ಮಾವಿನ ತೋಪಿಗೆ ತೆರಳಿದ್ದಾರೆ.

ತನ್ನ ತೋಪಿನಲ್ಲಿ ಮಾವಿನ ಹಣ್ಣು ಕೀಳುತ್ತಿದ್ದ ಹುಡುಗರನ್ನು ಕಂಡು ಕೋಪಗೊಂಡ ಮಾಲೀಕ, ಬಾಲಕನ ತಲೆಗೆ ಗುಂಡು ಹಾರಿಸಿ ಕೊಲೆಗೈದಿದ್ದಾನೆ. ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಖಗರಿಯಾದಲ್ಲಿರುವ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ.

Leave a Reply

Your email address will not be published.