ಮೋದಿಯನ್ನು ದ್ವೇಷಿಸುವ ಬದಲು ಅವರ ಕೆಲಸವನ್ನು ಪ್ರೀತಿಸಿ : ಎಸ್.ಎಲ್ ಭೈರಪ್ಪ

ಪ್ರಧಾನಿ ನರೇಂದ್ರ ಮೋದಿಯವರನನ್ನು ಸಾಹಿತಿ ಎಸ್‌ಎಲ್.ಭೈರಪ್ಪ ಹಾಡಿ ಹೊಗಳಿದ್ದಾರೆ. ‘ ಮೋದಿ ಒಂದು ಬಾರಿಯಲ್ಲ ಮೂರು ಬಾರಿ ಗೆದ್ದರೆ ಮಾತ್ರ ಭಾರತಕ್ಕೆ ಉಳಿಗಾಲವಿದೆ . ನಾಲ್ಕು ವರ್ಷದಲ್ಲಿ ಭಾರತವನ್ನ ಉತ್ತಮವಾಗಿ ಅಭಿವೃದ್ಧಿ ‌ಮಾಡಿದ್ದಾರೆ. ಭವಿಷ್ಯದಲ್ಲಿ ಭಾರತವನ್ನ ಅಭಿವೃದ್ಧಿ ಪಡಿಸಲು ಶ್ರಮಿಸುತ್ತಿದ್ದಾರೆ. ಎರಡು ಮೂ‌ರು ಬಣಗಳು ಸೇರಿ ಮೋದಿ ಸೋಲಿಸಲು ಪಣ ತೊಟ್ಟಿವೆ. ಮೋದಿಯನ್ನ ಸೋಲಿಸಿದರೆ ನಮ್ಮ ಮೂರ್ಖತನದ ಪರಮಾವಧಿ ‘ ಎಂದು ಹೇಳಿದ್ದಾರೆ.

‘ ನಮ್ಮ‌ ಶತ್ರು ರಾಷ್ಟ್ರಗಳಾದ ಚೀನಾ‌ ಮತ್ತು ಪಾಕಿಸ್ತಾನ ಮೋದಿಯಿಂದ ಹಿಂದೆ ಸರಿದಿವೆ. ಮೋದಿ ಬೇರೆ ಬೇರೆ ರಾಷ್ಟ್ರಗಳ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಿಂದೆ ಇದ್ದ ಯುಪಿಎ ಸರ್ಕಾರದಲ್ಲಿ ಏನು ಸಾಧನೆ‌ ಮಾಡಿದ್ರು….? ಯಾವುದೇ ಒಂದು ಕೆಲಸ ಮಾಡಲು ಮೇಡಂ ಅಂತ ಅವರ ಹಿಂದೆ‌ ಹೋಗುತ್ತಿದ್ದರರು. ಇಂತವರು ಬೇಕ ನಿಮಗೆ ?? ‘ ಎಂದು ಕೇಳಿದ್ದಾರೆ.

‘ ದೇಶದ ಅಭಿವೃದ್ಧಿ ಮಾಡುವವರು ಬೇಕಾ.? ಮೋದಿಯನ್ನ ದ್ವೇಷ ಮಾಡುವ ಬದಲು ಅವರ ಕೆಲಸವನ್ನ ಪ್ರೀತಿಸಿ ‘ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com