FIFA 2018 : ಅರ್ಜೆಂಟೀನಾಗೆ ಸೋಲಿನ ಶಾಕ್ ನೀಡಿದ ಕ್ರೋವೆಶಿಯಾ : ಫ್ರಾನ್ಸ್ ಗೆ 2ನೇ ಜಯ

ಗುರುವಾರ ನಿಝ್ನಿ ನೊವ್ಗೊರೊಡ್ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್-2018 ಟೂರ್ನಿಯ ‘ಡಿ’ ಗುಂಪಿನ ಲೀಗ್ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾ ತಂಡ ಸೋಲಿನ ಶಾಕ್ ಅನುಭವಿಸಿದೆ. ಅರ್ಜೆಂಟೀನಾ ವಿರುದ್ಧ ಕ್ರೊವೆಶಿಯಾ 3-0 ಗೋಲುಗಳ ಅಂತರದ ಜಯ ಸಾಧಿಸಿದೆ.

ಕ್ರೋವೆಶಿಯಾ ಪರವಾಗಿ ಆ್ಯಂಟೆ ರೆಬಿಕ್ (53′) ಲುಕಾ ಮಾಡ್ರಿಕ್ (80) ಇವಾನ್ ರಾಕಿಟಿಕ್ (90+1) ಗೋಲ್ ದಾಖಲಿಸಿ ಭರ್ಜರಿ ಗೆಲುವು ತಂದುಕೊಟ್ಟರು. ಅರ್ಜೆಂಟೀನಾ ವಿಶ್ವಕಪ್ ಟೂರ್ನಿಯಿಂದ ಗ್ರೂಪ್ ಹಂತವನ್ನೂ ದಾಟದೇ ಹೊರಬೀಳುವ ಭೀತಿ ಎದುರಿಸುತ್ತಿದೆ.

ಆಸ್ಟ್ರೇಲಿಯಾ ಹಾಗೂ ಡೆನ್ಮಾರ್ಕ್ ತಂಡಗಳ ನಡುವೆ ಸಮಾರಾ ಅರೆನಾದಲ್ಲಿ ನಡೆದ ‘ಸಿ’ ಗುಂಪಿನ ಲೀಗ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಡೆನ್ಮಾರ್ಕ್ ಪರವಾಗಿ 7ನೇ ನಿಮಿಷದಲ್ಲಿ ಕ್ರಿಸ್ಟಿಯನ್ ಎರಿಕ್ಸನ್ ಹಾಗೂ 38 ನಿಮಿಷದಲ್ಲಿ ಆಸ್ಟ್ರೇಲಿಯಾ ಪರವಾಗಿ ಮೈಲ್ ಜೆಡಿನ್ಯಾಕ್ ಗೋಲ್ ಬಾರಿಸಿದರು.

ಎಕ್ಟೆರಿನ್ ಬರ್ಗ್ ಕ್ರೀಡಾಂಗಣದಲ್ಲಿ ನಡೆದ ‘ಸಿ’ ಗುಂಪಿನ ಲೀಗ್ ಪಂದ್ಯದಲ್ಲಿ ಪೆರು ವಿರುದ್ಧ ಫ್ರಾನ್ಸ್ 1-0 ಗೋಲ್ ಅಂತರದ ಜಯ ಸಾಧಿಸಿದೆ. ಫ್ರಾನ್ಸ್ ಪರವಾಗಿ 34ನೇ ನಿಮಿಷದಲ್ಲಿ ಕೈಲಿಯಾನ್ ಎಮ್ಬಾಪ್ಪೆ ಗೋಲ್ ದಾಖಲಿಸಿದರು.

 

Leave a Reply

Your email address will not be published.

Social Media Auto Publish Powered By : XYZScripts.com