World Yoga Day 2018 : ವಿಶ್ವದಾದ್ಯಂತ ಯೋಗ ದಿನಾಚರಣೆ..

ಜೂನ್ 21ರಂದು ‘ಅಂತರಾಷ್ಟ್ರೀಯ ಯೋಗ ದಿನ’ ವನ್ನಾಗಿ ಆಚರಿಸಲಾಗುತ್ತಿದ್ದು, ಈ ಪ್ರಯುಕ್ತ ಭಾರತವೂ ಸೇರಿದಂತೆ ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಯೋಗ ದಿನವನ್ನು ಆಚರಿಸಿದ್ದಾರೆ. ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು, ಉತ್ತರಾಖಂಡ್ ರಾಜ್ಯದ ರಾಜಧಾನಿ ಡೆಹ್ರಾಡೂನ್ ನಲ್ಲಿ ಯೋಗಸಾನ ಮಾಡಿದ್ದಾರೆ. ಡೆಹ್ರಾಡೂನ್ ನಲ್ಲಿ ಪ್ರಧಾನಿ ಮೋದಿ ಜೊತೆಗೆ ಯೋಗಾಭ್ಯಾಸದಲ್ಲಿ ಐವತ್ತು ಸಾವಿರ ಜನರು ಪಾಲ್ಗೊಂಡಿದ್ದರು.

Image result for world yoga day 2018 USA

ಜೂನ್ 21ನೇ ದಿನಾಂಕವನ್ನು ‘ಅಂತರಾಷ್ಟ್ರೀಯ ಯೋಗ ದಿನ’ ಎಂದು 2014ರಲ್ಲಿ ಯುನೆಸ್ಕೋ ಘೋಷಿಸಿದ ನಂತರ ಯೋಗವು ಭಾರತಕ್ಕೆ ಮಾತ್ರ ಸೀಮಿತವಾಗದೇ ವಿಶ್ವದ ಎಲ್ಲೆಡೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಗರದ ವಿಶ್ವಪ್ರಸಿದ್ಧ ಐಫೆಲ್ ಟಾವರ್ ಕೆಳಗಿನ ಆವರಣದಲ್ಲಿ ಅನೇಕ ಜನರು ಯೋಗಾಸನವನ್ನು ಮಾಡಿದ್ದಾರೆ. ಜಪಾನ್ ದೇಶದ ಭಾರತೀಯ ರಾಯಭಾರಿ ಕಚೇರಿಯಲ್ಲಿಯೂ ಭಾರತ ಹಾಗೂ ಜಪಾನ್ ನಾಗರಿಕರು ಒಟ್ಟಿಗೆ ಯೋಗಾಭ್ಯಾಸ ಮಾಡಿದ್ದಾರೆ.

Image result for world yoga day 2018 USA

ವಿಶ್ವದ ಹಿರಿಯಣ್ಣನೆಂದು ಕರೆಯಲ್ಪಡುವ ಅಮೇರಿಕಾದಲ್ಲಿಯೂ ಯೋಗ ಆವರಿಸಿಕೊಂಡಿದೆ. ಅಮೇರಿಕದ ಚಿಕ್ಯಾಗೋ ನಗರದಲ್ಲಿರುವ ಮಿಲೇನಿಯಮ್ ಪಾರ್ಕ್ ಅಂಗಳದಲ್ಲಿ ಜೂನ್ 16ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿದೆ.

Image result for world yoga day 2018 USA

Leave a Reply

Your email address will not be published.