World Music Day : ನಾದಮಯ.. ಈ ಲೋಕವೆಲ್ಲ ಸಂಗೀತಮಯ..

ಸಂಗೀತ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ..? ಒಬ್ಬೊಬ್ಬರಿಗೆ ಒಂದೊಂದು ಬಗೆಯ ಸಂಗೀತ ಪ್ರಿಯವೆನಿಸುತ್ತದೆ. ರಾಕ್, ಪಾಪ್, ಜಾಜ್, ಸಿನೆಮಾ, ಭಾವಗೀತೆ, ಜನಪದ, ಪಾಶ್ಚಿಮಾತ್ಯ, ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಹೀಗೆ ಸಂಗೀತದಲ್ಲಿ ಅನೇಕ ಪ್ರಕಾರಗಳಿವೆ.  ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾದರೂ ಅವುಗಳ ಉದ್ದೇಶ ಕೇಳುಗರ ಮನಸ್ಸನ್ನು ಮುದಗೊಳಿಸುವುದಾಗಿದೆ. ಜೂನ್ 21ರಂದು ‘ವಿಶ್ವ ಸಂಗೀತ ದಿನ’ ವನ್ನಾಗಿ ಆಚರಿಸಲಾಗುತ್ತಿದೆ.

Related image

ಸಂಗೀತವು ಸಂತೋಷದಲ್ಲಿದ್ದಾಗ ಅದನ್ನು ಇಮ್ಮಡಿಗೊಳಿಸುತ್ತದೆ. ದುಃಖದಲ್ಲಿದ್ದಾಗ ನಮ್ಮನ್ನು ಸಂತೈಸುತ್ತದೆ. ದಣಿದ ದೇಹಕ್ಕೆ ಹೊಸ ಹುಮ್ಮಸ್ಸನ್ನು, ಚೈತನ್ಯವನ್ನೂ ನೀಡುತ್ತದೆ. ಪ್ರಕ್ಷುಭ್ದಗೊಂಡಿರುವ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ಅಷ್ಟೇ ಅಲ್ಲದೇ ಸಂಗೀತ ಹಲವು ರೋಗಗಳಿಗೆ ಮದ್ದು ಕೂಡ ಹೌದು ಎಂಬುದು ಸಾಬೀತಾಗಿದೆ. ಅನೇಕ ವೈದ್ಯರು ತಮ್ಮ ರೋಗಿಗಳಿಗೆ ಬೇಗ ಗುಣಮುಖರಾಗಲು ಮನೆಯಲ್ಲಿ ಒಳ್ಳೆಯ ಸಂಗೀತ ಕೇಳುವಂತೆ ಸಲಹೆ ನೀಡುತ್ತಾರೆ.

Image result for music lao tzu

ತೊಟ್ಟಿಲಲ್ಲಿ ಅಳುತ್ತಿರುವ ಪುಟ್ಟ ಮಗುವೂ ಕೂಡ ಅಮ್ಮನ ಇಂಪಾದ ಜೋಗುಳ ಕೇಳಿ ಮೆಲ್ಲಗೆ ನಿದ್ರೆಗೆ ಜಾರುತ್ತದೆ. ಉತ್ತಮ ಸಂಗೀತವು ಖಿನ್ನತೆ, ನಿದ್ರಾಹೀನತೆಯನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿರುವ ಅಂಶ ಬೆಳಕಿಗೆ ಬಂದಿದೆ. ಶಬ್ದಗಳಿಂದ ವಿವರಿಸಲಾಗದ ಮನಸಿನ ಸುಪ್ತ ಭಾವನೆಗಳನ್ನು ಸಂಗೀತದ ಮೂಲಕ ವ್ಯಕ್ತಪಡಿಸಬಹುದಾಗಿದೆ.

Related image

ಸಂಗೀತ ಒಂದು ಬಗೆಯ ಧ್ಯಾನವೂ ಆಗಿದೆ. ಧ್ಯಾನ ಮಾಡುವ ಸಮಯದಲ್ಲಿ ಇಂಪಾದ ಸಂಗೀತ ಕೇಳುವುದರಿಂದ ಧ್ಯಾನದ ತೀವ್ರತೆಯನ್ನು ಇನ್ನಷ್ಟು ಆಳಕ್ಕಿಳಿದು ಅನುಭವಿಸುಬಹುದಾಗಿದೆ. ಜೀವನದಲ್ಲಿ ಎದುರಾಗುವ ಕಷ್ಟದ ಸಂದರ್ಭಗಳಲ್ಲಿ ನಮ್ಮ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲೂ ಕೂಡ ಸಂಗೀತ ಪ್ರೇರಣೆ ಆಗಬಲ್ಲುದು. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ದೇಶಭಕ್ತಿಯ ಗೀತೆಗಳು ಸ್ವಾತಂತ್ರ್ಯ ಹೋರಾಗಾರರಿಗೆ ಅದಮ್ಯ ಚೈತನ್ಯವನ್ನೂ, ಛಲ, ಸ್ಫೂರ್ತಿಯನ್ನು ತುಂಬುವ ಕೆಲಸ ಮಾಡಿವೆ.

Image result for music spiritual

ಭಾರತೀಯ ಶಾಸ್ತ್ರೀಯ ಸಂಗೀತವು ಮನೋರಂಜನೆಯಷ್ಟಕ್ಕೇ ಸೀಮಿತವಾಗದೇ, ಆಧ್ಯಾತ್ಮದ ಆಯಾಮವನ್ನೂ ಕೂಡ ಹೊಂದಿದೆ. ಕರ್ನಾಟಕ ಸಂಗೀತದ ಪಿತಾಮಹ ಎನಿಸಿಕೊಂಡ ಪುರಂದರದಾಸರು ಅನೇಕ ಕೃತಿಗಳನ್ನು ರಚಿಸಿದ್ದಾರೆ. 12ನೇ ಶತಮಾನದಲ್ಲಿ ಶರಣರು ರಚಿಸಿದ ಸಾಮಾಜಿಕ, ಧಾರ್ಮಿಕ, ನೈತಿಕ ಮೌಲ್ಯಗಳನ್ನು ಹೊಂದಿದ್ದ ಕ್ರಾಂತಿಕಾರಿ ವಚನಗಳು, ಇಂದು ವಚನ ಸಂಗೀತ ಎಂಬ ಪ್ರಕಾರವೇ ಜನ್ಮ ತಳೆಯಲು ಕಾರಣವಾಗಿವೆ. ಸಂಗೀತದ ಮೂಲಕವೇ ದೇವರನ್ನು ಒಲಿಸಿಕೊಳ್ಳುವ ಬಗೆಯನ್ನು ಸೂಫಿ ಹಾಗೂ ಭಾರತೀಯ ಭಕ್ತಿ ಪಂಥಗಳಲ್ಲಿ ಕಾಣಬಹುದಾಗಿದೆ..

Leave a Reply

Your email address will not be published.

Social Media Auto Publish Powered By : XYZScripts.com