ಸಹಾಯ ಕೇಳಿಕೊಂಡು ಬಂದ ಮಹಿಳೆ ಮೇಲೆ ಶಿವಸೇನೆ ಮುಖಂಡನಿಂದ ಅತ್ಯಾಚಾರ !

ಅಲಿಗಢ : ಸಹಾಯ ಕೇಳಿಕೊಂಡು ಮನೆಗೆ ಹೋದ ಮಹಿಳೆಯ ಮೇಲೆ ಶಿವಸೇನೆಯ ಮುಖಂಡ ಅತ್ಯಾಚಾರ ನಡೆಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದ ಅಲಿಗಢದಲ್ಲಿ ಘಟನೆ ನಡೆದಿದೆ. ಅಲಿಗಢ ಮೂಲದ ಮಹಿಳೆ ಶಿವಸೇನೆ ಮುಖಂಡನ ವಿರುದ್ದ ದೂರು ದಾಖಲಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಆಸ್ಪತ್ರೆಗೆ ತೆರಳಿದ್ದ ಮಹಿಳೆಯ ಹಣ ಹಾಗೂ ಮೊಬೈಲನ್ನು ಕಳ್ಳರು ಕದ್ದಿದ್ದರು. ಶಿವಸೇನೆಯ ನಾಯಕನ ಮನೆಗೆ ಹೋಗಿ ಅವರು ಸಹಾಯ ಮಾಡುತ್ತಾರೆ ಎಂದು ಸ್ಥಳೀಯರು ಹೇಳಿದ್ದು, ಇದನ್ನು ಕೇಳಿಕೊಂಡು ಶಿವಸೇನಾ ಮುಖಂಡ ರಮೇಶ್ ಪೂಜಾರಿ ಮನೆಗೆ ಮಹಿಳೆ ತೆರಳಿದ್ದಾರೆ. ಈ ವೇಳೆ ಪೂಜಾರಿ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಸದ್ಯ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com