ಹಾಕಿ ರಾಷ್ಟ್ರೀಯ ಕ್ರೀಡೆಯೇ ಅಲ್ಲ : ಪ್ರಧಾನಿ ಮೋದಿಗೆ ಪತ್ರ ಬರೆದ ಓಡಿಶಾ ಸಿಎಂ

ಕ್ರಿಕೆಟ್‌ನಷ್ಟೇ ಭಾರತದಲ್ಲಿ ಹಾಕಿ ಜನಪ್ರಿಯವಾಗಿತ್ತು. ಹಾಕಿಯನ್ನು ರಾಷ್ಟ್ರೀಯ ಕ್ರೀಡೆಯೆಂದು ಹೇಳಲಾಗುತ್ತಿತ್ತು. ಆದ್ರೆ ಹಾಕಿ ಅಧಿಕೃತವಾಗಿ ರಾಷ್ಟ್ರೀಯ ಕ್ರೀಡೆ ಅಲ್ಲ. ಅದು ಹೇಳಿಕೆ ಮಾತ್ರ. ಕೇಂದ್ರ ಸರ್ಕಾರ ಇನ್ನೂ ಹಾಕಿಯನ್ನು ಅಧಿಕೃತವಾಗಿ ರಾಷ್ಟ್ರೀಯ ಕ್ರೀಡೆಯೆಂದು ಘೋಷಿಸಿಲ್ಲ ಎಂದು ನವೀನ್‌ ಪಟ್ನಾಯಕ್‌ ಆರೋಪಿಸಿದ್ದು, ಈ ಸಂಬಂಧ ಪ್ರಧಾನಿಗೆ ಪತ್ರ ಬರೆದಿದ್ದಾ ರೆ. 

ನವೆಂಬರ್‌ನಲ್ಲಿ ಒಡಿಶಾದಲ್ಲಿ ಹಾಕಿ ವಿಶ್ವಕಪ್‌ ನಡೆಯಲಿದೆ. ಇದರ ಸಿದ್ಧತೆಗಾಗಿ ಪರಿಶೀಲನೆ ಮಾಡುತ್ತಿದ್ದಾಗ ನನಗೆ ಗೊತ್ತಾದ ಒಂದು ಸಂಗತಿಯಿಂದ ಆಘಾತಕ್ಕೊಳಗಾಗಿದ್ದೇನೆ. ಹಾಕಿಯನ್ನು ಜನಪ್ರಿಯವಾಗಿ ರಾಷ್ಟ್ರೀಯ ಕ್ರೀಡೆ ಎನ್ನುತ್ತಿದ್ದರೂ ಅದನ್ನು ಅಧಿಕೃತವಾಗಿ ರಾಷ್ಟ್ರೀಯ ಕ್ರೀಡೆಯೆಂದು ಘೋಷಿಸಿಲ್ಲ. ದಯವಿಟ್ಟು ಅದನ್ನು ರಾಷ್ಟ್ರೀಯ ಕ್ರೀಡೆಯೆಂದು ಘೋಷಿಸಬೇಕು ಎಂದು ಪಟ್ನಾಯಕ್‌ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com