ಈಗ ನನ್ನ ಗಮನವೇನಿದ್ದರೂ ಬಜೆಟ್ ಮಂಡನೆ ಕಡೆಗೆ : H.D ಕುಮಾರಸ್ವಾಮಿ

ರಾಮನಗರ : ಕಾವೇರಿ ನಿರ್ವಹಣೆ ಮಂಡಳಿ ಆದೇಶ ಬರುವವರೆಗು ನಾವು ಕಾಯಲು ಸಾಧ್ಯವಿಲ್ಲ.  ನಮ್ಮ ರೈತರಿಗೆ ಅನುಕೂಲವಾಗುವಂತೆ ಕೆರೆ ನಾಲೆಗಳಿಗೆ ನೀರು ಬಿಡುವಂತೆ ಅಧಿಕಾರಿಗಳಿಗೆ ಆದೇಶ ಮಾಡಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.


ರಾಮನಗರದಲ್ಲಿ ಮಾತನಾಡಿದ ಅವರು, ಯಾವುದೇ ಕಾನೂನು ಸಮಸ್ಯೆ ಬಂದ್ರು ನಾನು ನೋಡಿಕೊಳ್ಳುತ್ತೇನೆ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಮ್ಮ ರೈತರ ಹಿತ ನನಗೆ ಮುಖ್ಯ. ಜಿಲ್ಲೆಯ ಎಲ್ಲ ಇಲಾಖೆಗಳಿಗೂ ಅಧಿಕಾರಿಗಳನ್ನ ಭರ್ತಿ ಮಾಡುತ್ತೇನೆ. ನಾನು ಅಧಿಕಾರ ಪಡೆದು 25 ದಿನ ಮಾತ್ರ ಆಗಿದೆ. ರಾಮನಗರದಲ್ಲಿ ಮಾತ್ರ ಸಮಸ್ಯೆ ಇಲ್ಲ.  ರಾಜ್ಯದ ಎಲ್ಲೆಡೆ ಸಮಸ್ಯೆ ಇದೆ.  ನನ್ನ ಗಮನ ಈಗ ಬಜೆಟ್ ಮಂಡನೆ ಕಡೆ ಇದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com