FIFA 2018 : ಪೋರ್ಚುಗಲ್‍ಗೆ ಜಯ ತಂದಿತ್ತ ರೊನಾಲ್ಡೊ : ಉರಗ್ವೆ, ಸ್ಪೇನ್ ತಂಡಗಳಿಗೆ ಗೆಲುವು

ಮಾಸ್ಕೋದ ಲುಝ್ನಿಕಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ಮೊರಾಕ್ಕೊ ವಿರುದ್ಧ ಪೋರ್ಚುಗಲ್ 1-0 ಗೋಲ್ ಅಂತರದ ಗೆಲುವು ಸಾಧಿಸಿದೆ. ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದ ಪೋರ್ಚುಗಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ಪಂದ್ಯದ ಮೊದಲರ್ಧದ 4ನೇ ನಿಮಿಷದಲ್ಲಿ ಗೋಲ್ ಬಾರಿಸಿ ಜಯ ತಂದು ಕೊಟ್ಟರು.

ಕಜಾನ್ ಅರೆನಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ‘ಬಿ’ ಗುಂಪಿನ ಮತ್ತೊಂದು ಲೀಗ್ ಪಂದ್ಯದಲ್ಲಿ ಇರಾನ್ ವಿರುದ್ಧ ಸ್ಪೇನ್ 1-0 ಗೋಲುಗಳಿಂದ ಜಯ ಗಳಿಸಿದೆ. ಪಂದ್ಯದ ದ್ವಿತೀಯಾರ್ಧದ 54ನೇ ನಿಮಿಷದಲ್ಲಿ ಸ್ಪೇನ್ ತಂಡದ ಡಿಯೆಗೋ ಕೋಸ್ಟಾ ಗೋಲ್ ಬಾರಿಸಿದರು.

ರೊಸ್ಟೊವ್ ಅರೆನಾದಲ್ಲಿ ಬುಧವಾರ ನಡೆದ ‘ಎ’ ಗುಂಪಿನ ಲೀಗ್ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಉರುಗ್ವೆ 1-0 ಗೆಲುವು ಸಾಧಿಸಿದೆ. ಉರುಗ್ವೆ ತಂಡದ ಪ್ರಮುಖ ಆಟಗಾರ ಲೂಯಿಸ್ ಸ್ವಾರೆಜ್ 23ನೇ ನಿಮಿಷದಲ್ಲಿ ಗೋಲ್ ದಾಖಲಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com