ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ನ್ಯೂಜಿಲಾಂಡ್ ಪ್ರಧಾನಿ ಜಸಿಂದಾ !

ನ್ಯೂಜಿಲೆಂಡ್‌ನ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆ ಆಕ್ಲೆಂಡ್‌ನಲ್ಲಿ ಅವರಿಗೆ ಹೆರಿಗೆಯಾಗಿದ್ದು, ಪತಿ ಕ್ಲಾರ್ಕ್ ಗೇಪೋರ್ಡ್ ಕೂಡ ಅವರೊಂದಿಗೆ ಆಸ್ಪತ್ರೆಯಲ್ಲಿ ಇದ್ದು ತಮ್ಮ ಸರಳತೆಯನ್ನು ಮೆರೆದಿದ್ದಾರೆ.

ನ್ಯೂಜಿಲೆಂಡ್‌ನ  ಪ್ರಧಾನಿ ಜಸಿಂದಾ ಆರ್ಡೆರ್ನ್ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಧಿಕಾರದಲ್ಲಿರುವಾಗಲೇ ಮಗುವಿಗೆ ಜನ್ಮ ನೀಡಿದ ವಿಶ್ವದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತನ್ನ ಮಗು ಹಾಗೂ ಪತ್ನಿಯೊಂದಿಗಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಅಪ್‌ಲೋಡ್‌ ಮಾಡಿದ್ದು, ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.

ಇನ್ನು 37ರ ಹರೆಯದ ಜಸಿಂದಾ ನ್ಯೂಜಿಲೆಂಡ್ ನ ಅತೀ ಕಿರಿಯ ಪ್ರಧಾನಿಯಾಗಿದ್ದು, ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಈಗ ತಮ್ಮ ಮೊದಲ ಮಗುವಿಗೆ ಜನ್ಮ ನೀಡುವ ಮೂಲಕ ಅಧಿಕಾರವಧಿಯಲ್ಲಿ ತಾಯಿಯಾದ ನ್ಯೂಜಿಲ್ಯಾಂಡ್ ನ ಮೊದಲ ಪ್ರಧಾನಿ ಎಂದು ಎಲ್ಲೆಡೆ ಸುದ್ದಿಯಲ್ಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com