ಕಾಲು ಜಾರಿ ಕಾಲುವೆಗೆ ಬಿದ್ದ ಕುದುರೆ : ಕೊನೆಗೂ ಫಲನೀಡಿದ ಅಗ್ನಿಶಾಮಕ ಸಿಬ್ಬಂದಿ ಶ್ರಮ

ಗದಗ: ಕಾಲುವೆಗೆ ಬಿದ್ದ ಕುದುರೆಯನ್ನು ಎರಡು ಗಂಟೆ ಕಾರ್ಯಾಚರಣೆಯ ಮೂಲಕ ರಕ್ಷಿಸಿರುವ ಘಟನೆ ಗದಗ ಜಿಲ್ಲೆ ರೋಣ ಪಟ್ಟಣದಲ್ಲಿ ನಡೆದಿದೆ.

ತಹಶೀಲ್ದಾರ್ ಕಾರ್ಯಾಲಯದ ಎದುರು ಕುದುರೆ ಕಾಲು ಜಾರಿ ಕಾಲುವೆಗೆ  ಬಿದ್ದು ಓದಾಡುತ್ತಿತ್ತು , ಈ ವಿಷಯ ತಿಳಿದ  ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ಕುದುರೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ಸತತ ಎರಡು ಗಂಟೆ ಕಾಲ ಸ್ಥಳೀಯರ ನೆರವಿನಿಂದ ಕಾರ್ಯಾಚರಣೆ ನಡೆಸಿ ಕುದುರೆಯನ್ನು ಮೇಲೆತ್ತಿದ್ದಾರೆ. ಈ ಮೂಲಕ ಕುದುರೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಅಧಿಕಾರಿಗಳು ಹಾಗೂ ಸ್ಥಳೀಯರ ಕಾರ್ಯಕರ್ತರಿಗೆ ಪ್ರಶಂಸೆಗಳ ಸುರಿಮಳೆ ಕೇಳಿಬರುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com