FIFA ಫೈನಲ್‍ಗೆ ಯಾವ ತಂಡಗಳು ತಲುಪಲಿವೆ : ಭವಿಷ್ಯ ನುಡಿದ ಡೇವಿಡ್ ಬೆಕಮ್ ಹೇಳಿದ್ದೇನು..?

ರಷ್ಯಾ ಆತಿಥ್ಯ ವಹಿಸಿಕೊಂಡಿರುವ ಫಿಫಾ ವಿಶ್ವಕಪ್ 2018 ಟೂರ್ನಿ ಆರಂಭಗೊಂಡು ಒಂದು ವಾರ ಕಳೆದಿದೆ. 5 ಬಾರಿಯ ವಿಶ್ವಚಾಂಪಿಯನ್ ಬ್ರೆಜಿಲ್ ಮೊದಲ ಪಂದ್ಯದಲ್ಲಿ ‘ಡ್ರಾ’ ಗೆ ತೃಪ್ತಿ ಪಟ್ಟುಕೊಂಡಿತ್ತು. ಬಲಿಷ್ಟ ಅರ್ಜೆಂಟೀನಾ ಹಾಗೂ ಐಸ್ಲ್ಯಾಂಡ್ ತಂಡಗಳ ನಡುವಿನ ಪಂದ್ಯವೂ ಸಹ ಡ್ರಾನಲ್ಲೇ ಅಂತ್ಯ ಕಂಡಿತ್ತು. ಹಾಲಿ ಚಾಂಪಿಯನ್ ಜರ್ಮನಿ ತನ್ನ ಮೊದಲ ಪಂದ್ಯದಲ್ಲಿ ಮೆಕ್ಸಿಕೋ ವಿರುದ್ಧ ಸೋತು ಮುಖಭಂಗ ಅನುಭವಿಸಿತ್ತು.

Related image

ಈ ಬಾರಿಯ ವಿಶ್ವಕಪ್ ನಲ್ಲಿ ಯಾವ ತಂಡಗಳು ಫೈನಲ್ ತಲುಪಲಿವೆ, ಯಾರು ಚಾಂಪಿಯನ್ ಆಗಲಿದ್ದಾರೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿದೆ. ಈ ನಡುವೆ ಇಂಗ್ಲೆಂಡ್ ತಂಡದ ಖ್ಯಾತ ಮಾಜಿ ಫುಟ್ಬಾಲ್ ಆಟಗಾರ ಡೇವಿಡ್ ಬೆಕಮ್ ಫೈನಲ್ ತಲುಪಲಿರುವ ತಂಡಗಳು ಯಾವವು ಎಂಬುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ.

Image result for FIFA 2018

‘ ಅರ್ಜೆಂಟೀನಾ ಹಾಗೂ ಇಂಗ್ಲೆಂಡ್ ತಂಡಗಳು ಫಿಫಾ ವಿಶ್ವಕಪ್-2018 ಟೂರ್ನಿಯ ಫೈನಲ್ ತಲುಪಲಿದ್ದು, ಟ್ರೋಫಿಗಾಗಿ ಸೆಣಸಾಡಲಿವೆ’ ಎಂದು ಡೇವಿಡ್ ಬೆಕಮ್ ಭವಿಷ್ಯ ನುಡಿದಿದ್ದಾರೆ. ಇಂಗ್ಲೆಂಡ್ ತನ್ನ ಮೊದಲ ಪಂದ್ಯದಲ್ಲಿ ಪನಾಮಾ ವಿರುದ್ಧ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿದ್ದರೆ, ಅರ್ಜೆಂಟೀನಾ ಇನ್ನೂ ಟೂರ್ನಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಬೇಕಿದೆ. ಡೇವಿಡ್ ಭವಿಷ್ಯ ಸತ್ಯವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published.

Social Media Auto Publish Powered By : XYZScripts.com