ಎಚ್‌ಡಿಕೆ ಸರ್ಕಾರ ಅಧಿಕಾರಕ್ಕೆ ಬಂದರೂ ತಪ್ಪಲಿಲ್ಲ ರೈತರ ಆತ್ಮಹತ್ಯೆ : ನೇಣಿಗೆ ಕೊರಳೊಡ್ಡಿದ ಮತ್ತೊಬ್ಬ ಅನ್ನದಾತ

ದಾವಣಗೆರೆ : ಕುಮಾರಸ್ವಾಮಿ ಸರ್ಕಾರ ಅಧಿಕಾರಕ್ಕೆ ಬಂದು ಕೊಟ್ಟ ಭರವಸೆಯಂತೆ  ರೈತರ ಸಾಲಮನ್ನಾ ಮಾಡುತ್ತಾರೆ ಎಂದು ರಾಜ್ಯದ ರೈತರು ಕಾಯುತ್ತಲೇ ಇದ್ದಾರೆ. ಅಲ್ಲದೆ   ಪ್ರತೀ ಬಾರಿಯೂ ರೈತರ  ಪರ ಮಾತನಾಡುತ್ತಾ ಸಾಯಬೇಡಿ ಎಂದು ಮನವಿ ಮಾಡುತ್ತಿದ್ದರೂ ಸಾಲಬಾಧೆಗೆ ರೈತ ಆತ್ಮಹತ್ಯೆಗೆ ಶರಣಾಗುತ್ತಲೇ ಇದ್ದಾನೆ.

ಅದೇ ರೀತಿ ಸಾಲಬಾಧೆ ತಾಳಲಾರದೆ ದಾವಣಗೆರೆಯ ಗುಮ್ಮನಹಳ್ಳಿಯಲ್ಲಿ 58 ವರ್ಷದ ಪರಶುರಾಮಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪರಶುರಾಮಪ್ಪ ವಿವಿಧ ಬ್ಯಾಂಕಿನಲ್ಲಿ ನಾಲ್ಕು ಲಕ್ಷ‌ ಸಾಲ ಮಾಡಿಕೊಂಡಿದ್ದು, ಮೆಕ್ಕೆಜೋಳ ಬೆಳೆಗೆ ಸೈನಿಕ ಹುಳು ಕಾಟದಿಂದ ಬೆಳೆ ಹಾಳಾಗಿತ್ತು. ಈ ಹಿನ್ನೆಲೆಯಲ್ಲಿ ಮನನೊಂದು ಪರಶುರಾಮಪ್ಪ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಘಟನೆಗೆ ಸಂಬಂಧ ಪಟ್ಟಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

One thought on “ಎಚ್‌ಡಿಕೆ ಸರ್ಕಾರ ಅಧಿಕಾರಕ್ಕೆ ಬಂದರೂ ತಪ್ಪಲಿಲ್ಲ ರೈತರ ಆತ್ಮಹತ್ಯೆ : ನೇಣಿಗೆ ಕೊರಳೊಡ್ಡಿದ ಮತ್ತೊಬ್ಬ ಅನ್ನದಾತ

  • June 21, 2018 at 5:11 PM
    Permalink

    If you want to get much from this post then you
    have to apply these methods to your won webpage.

    Reply

Leave a Reply

Your email address will not be published.