ಮೇಲ್ಮನೆ ಸಭಾಪತಿ ಡಿ.ಎಚ್ ಶಂಕರಮೂರ್ತಿ ಸೇವಾವಧಿ ಮುಕ್ತಾಯ..

ಮೇಲ್ಮನೆ ಸಭಾಪತಿ ಡಿಎಚ್​ ಶಂಕರಮೂರ್ತಿ ಸೇವಾವಧಿ ಇಂದಿಗೆ ಮುಕ್ತಾಯಗೊಂಡಿದೆ. ಕಳೆದ ಆರುವರ್ಷಗಳಿಂದ ವಿಧಾನಪರಿಷತ್​ ಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಿ.ಎಚ್​ ಶಂಕರಮೂರ್ತಿ ಸೇವಾ ಅವಧಿ ಇಂದು ಕೊನೆಯಾಗಿದೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್​ ಸಭಾನಾಯಕನಾಗಿ ಇಂದು ನನಗೆ ಕೊನೇ ದಿನ. ನನ್ನ ಕೆಲಸ ಪೂರ್ತಿಗೊಳಿಸಿ ಹೋಗುತ್ತಿದ್ದೇನೆ ಎನ್ನುವ ಖುಷಿ ಇದೆ. ಕಹಿ, ಸಂತೋಷದ ಅನೇಕ ಘಟನಾವಳಿಗಳು ನಡೆದಿವೆ.

Related image

ಆದರೆ ಕೆಲವು ವಿಷಯಗಳ ಕುರಿತು ಆಸೆ ಪಟ್ಟಿದ್ದೆ, ಟೀಕೆ ಮಾಡಿದ್ದೆ. ಜೊತೆಗೆ ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಂಡಿದ್ದೇನೆ ಎಂದರುಇನ್ನು ವಿಧಾನಸೌಧದ ಆವರಣದಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸಿದ ಖುಷಿಯಿದೆ. ಹುದ್ದೆಯಿಂದಷ್ಟೇ ನಿವೃತ್ತಿಯಾಗಿದ್ದೇನೆ. ಹೊರತು ರಾಜಕೀಯದಿಂದ ನಿವೃತ್ತಿಯಾಗಲ್ಲ. ರಾಷ್ಟ್ರೀಯ ಅಧ್ಯಕ್ಷರು ರಾಜ್ಯಪಾಲರ ಹುದ್ದೆ ಕೊಡುತ್ತೇನೆ ಎಂದಿದ್ದರು.

ನಾನು ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದೆ. ಆದರೆ ಹುದ್ದೆ ಸಿಗಲಿಲ್ಲ. ಇದರಿಂದಾಗಿ ಯಾವುದೇ ಬೇಸರವಿಲ್ಲ. ಮುಂದಿನ ಅವಕಾಶದ ಕುರಿತು ಮಾತುಕತೆ ಕುರಿತು ಇನ್ನಷ್ಟೆ ನಿರ್ಧಾರವಾಗಲಿದೆ.ನೈಋತ್ಯ ಪದವೀಧರ ಕ್ಷೇತ್ರದಿಂದ 1988ರಿಂದ ಪರಿಷತ್​ ಸದಸ್ಯರಾಗಿದ್ದ ಅವರು 1994, 2000,2006,2012ರಲ್ಲಿ ನಿರಂತರವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ.2006ರಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಅವರು ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2010ರಲ್ಲಿ ವಿಧಾನಪರಿಷತ್​ ಸದಸ್ಯರಾಗಿ ಆಯ್ಕೆಯಾದ ಇವರ ವಿರುದ್ಧ 2017ರಲ್ಲಿ ಕಾಂಗ್ರೆಸ್​ ಅವಿಶ್ವಾಸ ಗೊತ್ತುವಳಿಗೆ ಮುಂದಾಗಿದ್ದು, ಜೆಡಿಎಸ್​ ಬೆಂಬಲ ನೀಡಿದ ಹಿನ್ನಲೆ ಇದು ಸಾಧ್ಯವಾಗಿರಲಿಲ್ಲ

Leave a Reply

Your email address will not be published.

Social Media Auto Publish Powered By : XYZScripts.com