ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ರೈತರಿಗೆ ಗುಡ್‌ನ್ಯೂಸ್….ಏನದು ?

ದೆಹಲಿ : ರೈತರ ಆದಾಯ ದ್ವಿಗುಣ ಗೊಳಿಸಲು ಕೃಷಿ ವಲಯಕ್ಕೆ ಮೀಸಲಿಟ್ಟಿರುವ  ಬಜೆಟನ್ನು ಕೇಂದ್ರ ಸರ್ಕಾರ ದುಪ್ಪಟ್ಟುಗೊಳಿಸಿದ್ದು, 2.12ಲಕ್ಷ ಕೋಟಿ  ರೂಗೆ ಏರಿಕೆ ಮಾಡಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.

ಕರ್ನಾಟಕ ಸೇರಿದಂತೆ ದೇಶದ 600 ಜಿಲ್ಲೆಯ ರೈತರ ಜೊತೆ ಬುಧವಾರ ಮೋದಿ ಸಂವಾದ ನಡೆಸಿದ್ದು, ಈ ವೇಳೆ ರೈತರ ಆದಾಯ ಹೆಚ್ಚಿಸುವ ನಿಟ್ಟಿನಿಂದ ವೆಚ್ಚಕ್ಕೆ ಕಡಿವಾಣ, ಬೆಳೆಗಳಿಗೆ ಯೋಗ್ಯ ಬೆಲೆ, ಕೃಷಿ ಉತ್ಪನ್ನಗಳು ಹಾಳಾಗದಂತೆ ಸಂರಕ್ಷಣೆ ಸೇರಿದಂತೆ ಅನೇಕ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಕೃಷಿ ವಲಯಕ್ಕೆ ತಮ್ಮ ಸರ್ಕಾರ 2.12 ಲಕ್ಷ ಕೋಟಿ ರು. ಅನುದಾನ ಒದಗಿಸಿದೆ. ರೈತರ ಆದಾಯವನ್ನು 2022ರ ವೇಳೆಗೆ ದ್ವಿಗುಣಗೊಳಿಸುವ ನಿಟ್ಟಿನಿಂದ ಸರ್ಕಾರ ಕಾರ್ಯನಿರತವಾಗಿದೆ. ರೈತರಿಗೆ ಏನೇ ನೆರವು ಬೇಕಿದ್ದರೂ ಒದಗಿಸುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ.

ದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಷ್ಟೇ ಏರಿಕೆ ಕಂಡಿಲ್ಲ.  ಹಾಲು, ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯೂ ಹಿಂದೆಂದಿಗಿಂತಲೂ ಅಧಿಕವಾಗಿದೆ. 2017​-18ರಲ್ಲಿ 28 ಕೋಟಿ ಟನ್‌ ಆಹಾರಧಾನ್ಯ ಉತ್ಪಾದನೆಯಾಗಿದೆ. ಬಿತ್ತನೆಯಿಂದ ಹಿಡಿದು ಕಟಾವಿನ ತನಕ ಎಲ್ಲಾ ರೀತಿಯ ನೆರವನ್ನು ನೀಡಲಾಗುತ್ತಿದೆ. ರೈತರಿಗೆ ಯೋಗ್ಯ ಬೆಲೆ ಸಿಗುವಂತೆ ಖಾತರಿಪಡಿಸಲು ಇ- ನಾಮ್‌ ಎಂಬ ವೆಬ್‌ಸೈಟ್‌ ಆರಂಭಿಸಿದ್ದು, ರೈತರು ಇದರ ಪ್ರಯೋಜನ ಪಡೆಯುವಂತೆ  ಕರೆ  ನೀಡಿದ್ದಾರೆ.

Leave a Reply

Your email address will not be published.